ಇದು ಹಲಸಿನ ಕಾಯಿಯೋ, ಅಲ್ಲ ರುದ್ರಾಕ್ಷಿ ಕಾಯಿಯ ಗೊಂಚಲೋ !

ಕಕ್ಕಿಂಜೆ: ಹಲಸಿನ ಮರದ ಕೊಂಬೆಗಳಲ್ಲಿ ದೂರ ದೂರದಲ್ಲಿ ಹಲಸಿನ ಕಾಯಿಗಳು ಬಿಡುವುದು ನಾವು ಕಾಣುತ್ತೇವೆ. ಆದರೆ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಕ್ಕಿಂಜೆ ಪೇಟೆಯ ಮೂರ್ತಿ ಕ್ಲಿನಿಕ್ ಬಳಿಯ ಹಲಸಿನ ಮರದಲ್ಲಿ ಬಿಟ್ಟಿರುವ ಹಲಸಿನ ಕಾಯಿಗಳು ಕಂಡರೆ ಈ ಮರದಲ್ಲಿ ಎಲೆಗಳಿಗಿಂತ ಕಾಯಿಗಳೇ ಹೆಚ್ಚಿರುವಂತೆ ಭಾಸವಾಗುತ್ತಿದೆ.

ಇದೊಂದು ರೀತಿಯ ವಿಶೇಷ ಹಲಸಿನ ತಳಿಯಾಗಿದ್ದು, ಈ ತಳಿಗೆ ರುದ್ರಾಕ್ಷಿ ಹಲಸು ಎಂದು ಕರೆಯಲಾಗುತ್ತದೆ. ಈ ತಳಿಯ ಹಲಸಿನ ಮರಗಳು ಬಹಳ ಅಪರೂಪವಾಗಿದೆ. ಈ ರುದ್ರಾಕ್ಷಿ ಹಲಸಿನ ಕಾಯಿಗಳು ತಿನ್ನಲು ತುಂಬಾ ರುಚಿಕರವಾಗಿದ್ದು, ಒಂದು ಕಾಯಿಯಲ್ಲಿ ಒಂದರಿಂದ ಮೂರರವರೆಗೆ ಹಣ್ಣುಗಳು ಸವಿಯಲು ದೊರಕುತ್ತದೆ.

ಈ ಹಣ್ಣಿನ ಮರದ ವಿಡಿಯೋವನ್ನು ಮಾಡಿದ ಸುದ್ದಿ ಸಹಾಯವಾಣಿಯ ಈಶ್ವರ್ ಪಿ.ಹೆಚ್ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದು, ಇದನ್ನು ನೋಡಿದ ಉಡುಪಿಯ ಅತ್ರಾಡಿ ಕೃಷಿ ತಜ್ಞ ಗುರುರಾಜ ಬಾಳ್ತಿಲ್ಲಾಯ ಎಂಬವರು ಇದರ ಸಂಶೋಧನೆ ಮಾಡಲು ಮುಂದೆ ಬಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.