ತಣ್ಣೀರುಪಂಥ ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಬಿಹಾರ, ರಾಜಸ್ಥಾನದ 39 ಕೂಲಿಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಬಡವರು ಅಗತ್ಯ ಸಾಮಾಗ್ರಿಗಳ ಖರೀದಿಸಲಾಗದೆ ಸಂಕಷ್ಟಕ್ಕೆ ಸಿಲುಕಿರುವವರಿಗೆ ತಣ್ಣೀರುಪಂಥ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಾಯದಲ್ಲಿರುವ ಬಿಹಾರದ 24 ಕೂಲಿ ಕಾರ್ಮಿಕರು ಹಾಗೂ ಕಲ್ಲೇರಿಯಲ್ಲಿರುವ ರಾಜಸ್ಥಾನದ 15 ಮಂದಿ ಸೇರಿ ಒಟ್ಟು 39 ಕೂಲಿ ಕಾರ್ಮಿಕರಿಗೆ ಗ್ರಾಮಪಂಚಾಯತ್ ಹಾಗೂ ದಾನಿಗಳ ಸಹಾಯಧನದಿಂದ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಕೂಲಿ ಕಾರ್ಮಿಕರಿಗೆ ಗ್ರಾಮ ಪಂಚಾಯತ್ ಹಾಗೂ ವಿವಿಧ ದಾನಿಗಳಿಂದ 200 ಕೆಜಿ ಅಕ್ಕಿ, 20ಕೆ.ಜಿ ಮೈದಾ, ಎಣ್ಣೆ, ಪಡಿತರ ಸಾಮಾಗ್ರಿಗಳನ್ನು ಸಂಗ್ರಹಿಸಿ ಕೂಲಿ ಕಾರ್ಮಿಕರಿಗೆ ನೀಡಲಾಯಿತು.

ದಾನಿಗಳಾದ ನಝೀರ್ ಕ್ವಾಟ್ರಸ್, ಇಕ್ಬಾಲ್ ಡ್ರೈವರ್, ಶಂಭಾವಿ ಪಂರ್ದ, ರಾಜು ಪೂಜಾರಿ, ಕೀರ್ತನ್, ಇಬ್ರಾಹಿಂ ಬೀಡಿ, ಮಹ್ಮದ್ ಕ್ವಾಟ್ರಸ್, ಮೀನಾಕ್ಷಿ ಪೂಂಜಾಳ, ಸುಜಾತಾ ಸುರೇಶ್ ನಾಯ್ಕ, ಸಿನಾನ್, ಗಣೇಶ ಪಂರ್ದ, ರಝಾಕ್ ಕಡಂಬಿಲ, ಸಿದ್ಧಿಕ್ ಕ್ವಾಟ್ರಸ್, ಗಿರಿಜಾ ಆಚಾರ್ಯ ಕರಾಯ, ಬೀಫಾತಿಮ ಉಮ್ಮರ್, ಮೂಸ ಕ್ವಾಟ್ರಸ್, ಆದಮ್ ಮೀನು ವ್ಯಾಪಾರಿ, ಆಸ್ಯಮ್ಮ ಕಾಸಿಂ, ಉಮರಬ್ಬ ಹೋಟೆಲ್, ಉಮ್ಮರ್, ಬೀಫಾತಿಮ ಹಸನಬ್ಬ, ಶಿಬು ಕರಾಯ ಸಾಮಾಗ್ರಿಗಳಿಗೆ ಸಹಾಯಧನ ನೀಡಿದರು.

ಈ ಸಂದರ್ಭದಲ್ಲಿ ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು, ಪಂಚಾಯತ್ ಸದಸ್ಯರಾದ ಅಯೂಬ್, ನವೀನ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.