ತೆಂಕಕಾರದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಸಮಿತಿಯಿಂದ ಆಹಾರ ಕಿಟ್ ವಿತರಣೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

ತೆಂಕಕಾರಂದೂರು : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತೆಂಕಕಾರಂದೂರು ಇದರ ಜಾತ್ರೋತ್ಸವ ಸಮಿತಿ ವತಿಯಿಂದ ಅಶಕ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೀಪ ಬೆಳಗಿಸುವ ಮೂಲಕ ಎ. 27ರಂದು ಚಾಲನೆ ನೀಡಿದರು.

ಕೊರೊನಾ ಮಹಾಮಾರಿಯಿಂದ ಜಗತ್ತು ತತ್ತರಿಸಿದ್ದು ಹಲವಾರು ಕುಟುಂಬಗಳು ತುಂಬ ಸಂಕಷ್ಟವನ್ನು ಎದುರಿಸುತ್ತಿದ್ದು ಬಳಂಜ-ನಾಲ್ಕೂರು-ತೆಂಕಕಾರಂದೂರು ಗ್ರಾಮದ ಒಂದು ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಹಾಗೂ 1 ಕೆ.ಜಿ ಉಪ್ಪಿನಕಾಯಿಯಂತೆ ಸುಮಾರು 250 ಕುಟುಂಬಗಳಿಗೆ 25 ಕ್ವಿಂಟಲ್ ಅಕ್ಕಿ, 2.50 ಕ್ವಿಂಟಲ್ ಉಪ್ಪಿನಕಾಯಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್ ಕಾಪಿನಡ್ಕ, ಜಾತ್ರಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಗತಿಪರ ಕೃಷಿಕ ವಿಠಲ ಹೆಗ್ಡೆ ಮಾರುತಿ ನಿಲಯ, ಜಾತ್ರಾ ಸಮಿತಿ ಮಾಜಿ ಅಧ್ಯಕ್ಷರುಗಳಾದ ಅನಿಲ್ ಕುಮಾರ್ ಮಾಳಿಗೆ ಮನೆ, ಸಂತೋಷ್ ಹೆಗ್ಡೆ ಮಾರುತಿ ನಿಲಯ, ದೇವಸ್ಥಾನದ ಆಡಳಿತ ಮುಕ್ತೇಸರ ವಿಷ್ಣು ಸಂಪಿಗೆತ್ತಾಯ, ಬಳಂಜ ಗ್ರಾ.ಪಂ. ಸದಸ್ಯ ಹೇಮಂತ್ ಕಟ್ಟೆ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಅಧ್ಯಕ್ಷ ಅಶ್ವತ್ಥ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.