ಲಾಯಿಲ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಫ್ರಾನ್ಸಿಸ್ ಡಿ’ಸೋಜಾರವರಿಂದ ಅರ್ಹ ಶ್ರಮಿಕ ವರ್ಗಕ್ಕೆ ನೆರವು

Advt_NewsUnder_1
Advt_NewsUnder_1
Advt_NewsUnder_1

ಲಾಯಿಲ : ಕೊರೊನಾ ಮಹಾಮಾರಿಗೆ ಸಿಲುಕಿದ ಜನರ ಕಷ್ಟಗಳನ್ನು ಅರಿತು ಬಡವರ ಹಸಿವನ್ನು ನೀಗಿಸಲು ಈಗಾಗಲೇ ನಮ್ಮ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜ ರವರು 30,೦೦೦ ಕಿಟ್ ವಿತರಣೆಯನ್ನು ಮಾಡಿದ್ದಾರೆ. ಇದೆ ರೀತಿ ನಮ್ಮ ಗ್ರಾಮದ ಜನರ ಕಷ್ಟಗಳನ್ನು ಅರಿತ ಪಂಚಾಯತ್ ಸದಸ್ಯರಾದ  ಫ್ರಾನ್ಸಿಸ್ ಡಿಸೋಜಾರವರು ಸುಮಾರು 2,50,೦೦೦ ಮೌಲ್ಯದ 500 ಕಿಟ್ಟನ್ನು ಎ.27 ಶಾಸಕರ ಮೂಲಕ ಜನರಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಕನ್ನಾಜೆಯಲ್ಲಿ ಚಾಲನೆಯನ್ನು ನೀಡಿದರು.

ಎ.27ರಂದು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ ಗ್ರಾಮದ ನಿವಾಸಿಗಳಿಗೆ ಕಿಟ್ ವಿತರಿಸಲಾಯಿತು. ಇದರ ಮುಂದುವರಿದ ಬಾಗವಾಗಿ ಎ.28ರಂದು ವಿವೇಕಾನಂದನಗರ ಮತ್ತು ಕುಂಟಿನಿಯ ಅರ್ಹ ಕುಟುಂಬಗಳಿಗೆ ದಿನಸಿ ಕಿಟ್ಟನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ  ಧನಂಜಯ ರಾವ್, ತಾಲೂಕು ಪಂಚಾಯತ್ ಸದಸ್ಯರಾದ  ಸುಧಾಕರ್ ಬಿ. ಎಲ್ ಪಂಚಾಯತ್ ಉಪಾಧ್ಯಕ್ಷರಾದ  ಗಿರೀಶ್ ಡೊಂಗ್ರೆ, ಭಾ. ಜ. ಪ ವಿಭಾಗ ಸಂಘಟನಾ ಕಾರ್ಯದರ್ಶಿ  ಪ್ರಸಾದ್ ಕುಮಾರ್. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಎಲ್ಲಾ ಪಕ್ಷದ ಪಂಚಾಯತ್ ಸದಸ್ಯರು ,ಇಂಡಿಯನ್ ಅರ್ಥ್ ಮೂವರ್ಸ್ ಮಾಲೀಕರಾದ  ಲಕ್ಷಣ್ ಸಪಲ್ಯ, ಶ್ರೀ ಗಣೇಶ್ ಸಪಲ್ಯ ಕನ್ನಾಜೆ ಠಿ.ತಿ.ಜ ಗುತ್ತಿಗೆದಾರ ಡಿ. ರಮೇಶ್ ಹಾಗೂ ಊರಿನ ಸ್ಥಳೀಯರು ಉಪಸ್ಥಿತರಿದ್ದರು.

ಕಿಟ್ ತಯಾರಿ ಹಾಗೂ ವಿತರಣೆಯನ್ನು  ಸುರೇಶ್ ಬರಮೇಲು ಲಾಯಿಲ ಗ್ರಾ.ಪಂ. ಸದಸ್ಯರಾದ ಮಹೇಶ್, ಸ.ಕಿ.ಪ್ರಾ.ಶಾಲೆ ಕುಂಟಿನಿ ಇದರ ಅಧ್ಯಕ್ಷೆ  ನೇತ್ರಾ, ಉದಯ ಕುಮಾರ್, ನಾಗಪ್ರಸಾದ್, ಮತ್ತು ತಂಡದವರು ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.