ದಿವ್ಯಾಂಗರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ ಯಂಗ್ ಚಾಲೆಂಜರ್ಸ್ ಮುಂಡಾಜೆ

ಮುಂಡಾಜೆ:ಬೆಳ್ತಂಗಡಿ ತಾ.ನ ಮುಂಡಾಜೆ ಗ್ರಾ.ಪಂ.ವ್ಯಾಪ್ತಿಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಊರ ದಾನಿಗಳ ಸಹಕಾರದಲ್ಲಿ,

ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಮುಂಡಾಜೆ ಗ್ರಾಮದ 40ಜನ ದಿವ್ಯಾಂಗರ ಕುಟುಂಬಗಳಿಗೆ ಸೇರಿದಂತೆ ಒಟ್ಟು50 ಕುಟುಂಬಗಳಿಗೆ ಆಹಾರ ಕಿಟ್ ಅನ್ನು ಎ.24ರಂದು ಕ್ಲಬ್ ನ ಸಭಾ ಭವನದಲ್ಲಿ ವಿತರಿಸಲಾಯಿತು.

ಕ್ರೀಡಾ ಸಂಘದ ಅಧ್ಯಕ್ಷರೂ ಆಗಿರುವ ತಾ.‌ ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿ ಕುಂಞಿ ಅಧ್ಯಕ್ಷತೆ ವಹಿಸಿದ್ದರು.

ಬೆಳ್ತಂಗಡಿ ತಾ.ಔಷಧ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಸುಜಿತ್ ಭಿಡೆ , ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್,ಧರ್ಮಸ್ಥಳ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್, ಮಾಜಿ ಯೋಧ ಕೆ.ಆರ್.ಹರೀಶ್ ಕೊಡಗು, ಮುಂಡಾಜೆ ರೋಟರಿ ಸಮುದಾಯ ದಳದ ಅಧ್ಯಕ್ಷ ಪ್ರಹ್ಲಾದ ಫಡ್ಕೆ, ವಿದೇಶದ ಐರ್ಲೆಂಡ್ ನಲ್ಲಿ ಆರೋಗ್ಯ ಕಾರ್ಯಕರ್ತರಾಗಿರುವ ಟ್ರಿನಿಟಿ ಫಿಲಿಪ್,ಮುಂಡಾಜೆ ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ಗೌಡ ದೇವಸ್ಯ, ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಸತ್ಯನಾರಾಯಣ ಹೊಳ್ಳ‌ ಕಾನರ್ಪ ಮೊದಲಾದವರು ಅತಿಥಿಗಳಾಗಿದ್ದರು.

ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮ ನಡೆಯಿತು.
ದೇಶದಲ್ಲಿ ಕೊರೊನಾದಿಂದ ಮೃತ ಪಟ್ಟವರಿಗೆ ಹಾಗೂ ವಿಶ್ವ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ನಿರೂಪಿಸಿದರು.
ಪದಾಧಿಕಾರಿಗಳಾದ ಕೃಷ್ಣಪ್ಪ, ಪುಷ್ಪರಾಜ್, ಸಾಂತಪ್ಪ, ಶಿಶಿಧರ ಠೋಸರ್, ಪ್ರವೀಣ್ ಕುಮಾರ್, ಗ್ರಾ.ಪಂ ವಿ.‌ಆರ್.‌ಡಬ್ಲ್ಯು ಮಜೀದ್ ಅಶೋಕ್‌ಶೆಟ್ಟಿ‌ ಮೊದಲಾದವರು ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.