ಬದುಕು ಕಟ್ಟೋಣ ಬನ್ನಿ ತಂಡದಿಂದ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಆಹಾರದ ಕಿಟ್ಟ್ ವಿತರಣೆ

Advt_NewsUnder_1
Advt_NewsUnder_1

ಉಜಿರೆ; ಜನಪರ ಸಾಮಾಜಿಕ ಕಾರ್ಯಕ್ರಮ, ‌ಮಾನವೀಯ ಸ್ಪಂದನೆಗೆ ಹೆಸರಾಗಿರುವ ಬದುಕು ಕಟ್ಟೋಣ ಬನ್ನಿ ತಂಡದಿಂದ ಬೆಳ್ತಂಗಡಿ ಗೃಹರಕ್ಷಕ ದಳದ75 ಮಂದಿ ಕಾರ್ಯಕರ್ತರಿಗೆ ಅಗತ್ಯ ಆಹಾರ ವಸ್ತುಗಳ‌ ಕಿಟ್ಟ್ ವಿತರಣೆ ಏ. 25 ರಂದು ನಡೆಯಿತು.

ಶಾಸಕ ಹರೀಶ್ ಪೂಂಜ ಗೃಹರಕ್ಷಕ ದಳದ ಸೇವೆಯನ್ನು ಗುರುತಿಸಿ ಸಂಘಟನೆಯ ಪರವಾಗಿ ಕಿಟ್ಟ್  ವಿತರಣೆ ನಡೆಸಿದರು.

ಮುಖ್ಯ ಅತಿಥಿಗಳಾಗಿ ಉಜಿರೆ ಜನಾರ್ದನ ದೇವಸ್ಥಾನದ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಭಾಗಿಯಾಗಿದ್ದರು.

ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥ, ಲಕ್ಷ್ಮೀ ಗ್ರೂಪ್ಸ್ ನ ಮಾಲಕ ಮೋಹನ್ ಕುಮಾರ್ ಉಪಸ್ಥಿತರಿದ್ದರು.
ಇನ್ನೋರ್ವ ಮುಖ್ಯಸ್ಥ, ಸಂಧ್ಯಾ ಟ್ರೇಡರ್ಸ್ ಮಾಲಿಕ ರಾಜೇಶ್ ಪೈ ಪ್ರಸ್ತಾವನೆಗೈದರು.

ತಿಮ್ಮಯ್ಯ ನಾಯ್ಕ ಸ್ವಾಗತಿಸಿದರು. ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ‌ ಲಾಯಿಲ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.