ಗರ್ಡಾಡಿ ಪಡಂಗಡಿ ಬಿಲ್ಲವ ಸಂಘದಿಂದ 50 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಗರ್ಡಾಡಿ: ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಗರ್ಡಾಡಿ ಪಡಂಗಡಿ ಆಶ್ರಯದಲ್ಲಿ
ಯುವ ಬಿಲ್ಲವ ವೇದಿಕೆ ನೇತೃತ್ವದಲ್ಲಿ
ಮಹಿಳಾ ಬಿಲ್ಲವ ವೇದಿಕೆಯ ಸಹಕಾರದೊಂದಿಗೆ 50 ಸ್ವಜಾತಿ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.


ದೇಶದೆಲ್ಲೆಡೆ ಮಹಾಮಾರಿ ಕೋರೋಣ ದಿಂದಾಗಿ ಲಾಕ್ ಡೌನ್ ಆದ ಕಾರಣ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಸ್ವಜಾತಿಯ ಬಡ ಕುಟುಂಬಕ್ಕೆ ಸ್ಪಂದಿಸಲು ಸ್ವಜಾತಿಯ ಕೊಡುಗೈ ದಾನಿಗಳ ಸಹಕಾರದೊಂದಿಗೆ ಸುಮಾರು ಐವತ್ತು ಸ್ವಜಾತಿ ಬಡ ಕುಟುಂಬಗಳಿಗೆ ತಲಾ ಹತ್ತು ಕೆಜಿ ಅಕ್ಕಿ ,ಒಂದು ಕೆಜಿ ಸಕ್ಕರೆ ,ಒಂದು ಕೆಜಿ ಉಪ್ಪು ,ಒಂದು ಕೆಜಿ ನೀರುಳ್ಳಿ ,ಕಾಲು ಕೆಜಿ ಮೆಣಸು ,ಒಂದು ಪ್ಯಾಕೆಟ್ ಸಜ್ಜಿಗೆ ,ಚಾಹುಡಿಯನ್ನು ವಿತರಿಸಲಾಯಿತು ಹಾಗೂ ತೀರಾ ಬಡತನದಲ್ಲಿದ್ದು ಅನಾರೋಗ್ಯದಲ್ಲಿರುವ
ಸಿದ್ದಣ್ಣ ಮಾಪಲ್ ಗುಡ್ಡೆ,
ತನಿಯಪ್ಪ ಪೂಜಾರಿ ಮರಕಿನ,
ಜಯರಾಮ ಪೂಜಾರಿ ಪೊಯ್ಯ ಗುಡ್ಡೆ , ಇವರಿಗೆ ತಲಾ ರೂ 5 ಸಾವಿರದಂತೆ ವೈದ್ಯಕೀಯ ಚಿಕಿತ್ಸೆ ಖರ್ಚನ್ನು ಸಂಘದ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಕೆಎಸ್ ಯೋಗೀಶ್ ಕುಮಾರ್, ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷ ಮೋಹನ್ ಬಂಗೇರ ಮಜಲು,ಕಾರ್ಯದರ್ಶಿ ಗೋಪಾಲ್ ಪೂಜಾರಿ ಓಂಕಾರ್ ಗರ್ಡಾಡಿ , ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಪೂಜಾರಿ ಶಾಂತಿ ಬೆಟ್ಟು,ಪಡಂಗಡಿ ತಾ.ಪಂ ಸದಸ್ಯೆ ಸುಶೀಲ ಬರಾಯ ,ಬೆಳ್ತಂಗಡಿ ತಾಲ್ಲೂಕು ಸಂಘದ ನಿರ್ದೇಶಕರಾದ ಶ್ರೀಧರ ಪೂಜಾರಿ ಪರಿ ಮುಗ , ಪಡಂಗಡಿ ಗ್ರಾ. ಪಂ ಸದಸ್ಯ ಸುಂದರ ಪೂಜಾರಿ ಹುಲ್ಲಿಂಜ,ಪಡಂಗಡಿ ಗ್ರಾ. ಪಂ ಮಾಜಿ ಅಧ್ಯಕ್ಷ ಸುರೇಶ್ ಪೂಜಾರಿ ಪೊಯ್ಯ ಗುಡ್ಡೆ ,ಯೋಗೀಶ್ ಸಾಲ್ಯಾನ ಪೊಯ್ಯೆ ಗುಡ್ಡೆ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.