ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸದಸ್ಯರಿಗೆ ಅಕ್ಕಿ ವಿತರಣೆ

ಗೇರುಕಟ್ಟೆ : ಇಲ್ಲಿಯ ಹಾಲು ಉತ್ಪಾದಕರ ಸಂಘದ ವತಿಯಿಂದ 10 ಕಿ.ಲೋ.ಕುಚ್ಚಲು ಅಕ್ಕಿ ವಿತರಣೆ ಎ.25 ರಂದು ಸಂಘದಲ್ಲಿ ನಡೆಯಿತು.

ದೇಶದಾಂತ್ಯ ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮವಾಗಿ ಬಡ ಕುಟುಂಬಗಳು, ಕೃಷಿಕರು ಸಂಕಷ್ಟದ ಸ್ಥಿತಿಯಲ್ಲಿರುವಾಗ ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘವು ಸಂಘದ ಸದಸ್ಯರಿಗೆ, ಕಳಿಯ ಪಂಚಾಯತು ವ್ಯಾಪ್ತಿಯ ಆಶಾ ಕಾರ್ಯಕರ್ತೆ ಯವರಿಗೆ ಮತ್ತು ಕಡು ಬಡತನದ ಕುಟುಂಬಗಳಿಗೆ ಅಕ್ಕಿ ವಿತರಣೆಯನ್ನು ಮಂಗಳೂರು ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ವಿತರಣೆ ಮಾಡಿದರು.ಅವರು ಮಾತನಾಡುತ್ತಾ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಸಾಮಾಜಿಕ ಅಂತರ,ಶುಚ್ಚಿತ್ವ, ಆರೋಗ್ಯ ಕಾಪಾಡಲು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು.ಹಾಗೂ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸುಮಾರು 335 ಕುಟುಂಬಗಳಿಗೆ ಅಂದಾಜು 1ಲಕ್ಷ 25 ಸಾವಿರ ಮೊತ್ತದ ಅಕ್ಕಿ ಕಿಟ್ ಗಳ ವಿತರಣೆಯನ್ನು ಮಾಡಲಾಯಿತು ಎಂದು ಸಂಘದ ಅಧ್ಯಕ್ಷ ಜನಾರ್ದನ ಗೌಡ ಕುಳಾಯಿ ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಯಶೋಧರ ಶೆಟ್ಟಿ ಕೊರಂಜ ಸಂಘದ ನಿರ್ದೇಶಕರು,ಸದಸ್ಯರು, ಕಾರ್ಯದರ್ಶಿ ಗುಲಾಬಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.