150 ಯಕ್ಷಗಾನ ಕಲಾವಿದರಿಗೆ ಶ್ರಮಿಕ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಕೋವಿದ್ -19 ಸೋಂಕಿನ ಹಿನ್ನಲೆಯಲ್ಲಿ ಲಾಕ್ ಡೌನ್ ನಿಂದ ಯಕ್ಷಗಾನ ಮೇಳಗಳ ತಿರುಗಾಟವನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದ ಸಂಕಷ್ಟದಲ್ಲಿರುವ ತಾಲೂಕಿನ ಯಕ್ಷಗಾನ ಕಲಾವಿದರು ಹಾಗೂ ರಂಗ ಪರಿಚಾಕರಿಗೆ ಶಾಸಕ ಹರೀಶ್ ಪೂಂಜ ಅವರು ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಸಾಂಕೇತಿಕವಾಗಿ ಶ್ರಮಿಕ ನೆರವು ಆಹಾರ ಕಿಟ್ ಗಳನ್ನು ಎ.24 ರಂದು ವಿತರಿಸಿದರು.

ಕಿಟ್ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಲಾಕ್ ಡೌನ್ ನಿಂದ ಮೇಳಗಳ ತಿರುಗಾಟದಿಂದ ಕಲಾವಿದರು ಸಮಸ್ಯೆಯಲ್ಲಿದ್ದಾರೆ. ತಾಲೂಕಿನ ಸುಮಾರು 150ಕ್ಕೂ ಹೆಚ್ಚು ಕಲಾವಿದರಿದ್ದು, ಅವರಿಗೆ ಶ್ರಮಿಕ‌ ನೆರವು ಆಹಾರ ಧಾನ್ಯಗಳ ಕಿಟ್ ಇಂದು ಸಾಂಕೇತಿಕವಾಗಿ ವಿತರಿಸಲಾಗುತ್ತಿದೆ. ಎಲ್ಲರ ಸಹಕಾರದಿಂದ ಕಲಾವಿದರನ್ನು ಗುರುತಿಸಲಾಗಿದ್ದು, ನಾಳೆ( ಶನಿವಾರ) ಕಲಾವಿದ ಮನೆಗಳಿಗೆ ಕಿಟ್ ಗಳನ್ನು ತಲುಪಿಸಲಾಗುವುದು ಎಂದರು.
ಇದೇ ಸಂದರ್ಭ ಸುಂಕದಕಟ್ಟೆ ಮೇಳದ ಕಲಾವಿದರಿಗಾಗಿ ರೂ. 20000 ಸಾವಿರ ನಗದನ್ನು ಶಾಸಕರು ಹಸ್ತಾಂತರಿಸಿದರು.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ, ಉದ್ಯಮಿಗಳಾದ ಮೋಹನ್ ಕುಮಾರ್, ರಾಘವೇಂದ್ರ ಬೈಪಾಡಿತ್ತಾಯ,
ಸಂಯೋಜಿಸಿದ ಡಾ‌.ಎಂ.ಎಂ.ದಯಾಕರ್, ವೆಂಕಟರಮಣ ಹೊಳ್ಳ, ಶಿತಿಕಂಠ ಭಟ್, ಮಹೇಶ್ ಕನ್ಯಾಡಿ, ಮುರಳಿ ಕೃಷ್ಣಾಚಾರ್,
ಸಿದ್ದಾರ್ಥ ರಾಜ್, ಪ್ರಸಾದ್ , ಸುಬ್ರಹ್ಮಣ್ಯ ಭಟ್ ಮೊದಲಾದವರು ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.