ಹೈನುಗಾರನಿಂದ ಪಂಚಾಯತಕ್ಕೆ ಕೊಡುಗೆ

ಬೆಳ್ತಂಗಡಿ:  ತಣ್ಣೀರು ಪಂಥ ಗ್ರಾಮ ಪಂಚಾಯತ್, ಕರಾಯ ದ “ವೇಲಂಕಣಿ (ಜಾನುವಾರು )”ಫಾರ್ಮ್ ನ ಮಾಲಕರಾದ ಜಿಲ್ಲೆಯಲ್ಲೇ ಅತೀ ಹೆಚ್ಚು ಹಾಲು ಉತ್ಪದಕರಾದ ವಿಲಿಯಮ್ ಲೋಬೊ ಗ್ರಾಮ ಪಂಚಾಯತ್ ವತಿಯಿಂದ ಬಡವರಿಗೆ ನೀಡಲ್ಪಡುವ ಅಕ್ಕಿ ಸಹಾಯ ಕ್ಕೆ ತಮ್ಮ ವತಿಯಿಂದ ಒಂದು
ಕ್ವಿoಟಾಲ್ ಅಕ್ಕಿ ಯ ಮೊತ್ತ ರೂ 3500, ನ್ನು ಪಂಚಾಯತ್ ಸದಸ್ಯ ನವೀನ್ ಕುಮಾರ್ ಮೂಲಕ ನೀಡಿರುತ್ತಾರೆ ಹಾಗೂ ಕರಾಯ, ಪೂಂಜಾಳ ನಿವಾಸಿ ಅನಿಲ್ ಕುಮಾರ್ ತಮಗೆ ಗ್ರಾಮ ಪಂಚಾಯತ್ ವತಿಯಿಂದ ನೀಡಿದ 10 ಕೆಜಿ ಅಕ್ಕಿ ಯನ್ನುತಿರಸ್ಕರಿಸಿ ತಮ್ಮವತಿಯಿಂದಲೇ ಇಬ್ಬರು ಬಡ ಕುಟುಂಬ ಕ್ಕೆ ತಲಾ 10 ಕೆಜಿ ಅಕ್ಕಿಯನ್ನು ನೀಡುವ ಮುಖಾಂತರ ಸಹಾಯ ಮಾಡಿದ್ದಾರೆ.
ಅಲ್ಲದೆ ಕಲ್ಲೇರಿ ಯ ” ಸಿಂಧೂರ”
ಕ್ಲಿನಿಕ್ ನ ಡಾ. ಸಂತೋಷ್ ರವರು 50 ಬಾಟಲ್ ಸನಿಟೈಸರ್ ನ್ನು ಗ್ರಾಮ ಪಂಚಾಯತ್ ಗೆ ನೀಡಿ ಸಹಕರಿಸಿದ್ದಾರೆ.
ಈ ಎಲ್ಲಾ ದಾನಿಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ  ಜಯವಿಕ್ರಮ ಕಲ್ಲಾಪು ಕೃತಜ್ಞತೆ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.