ಪಡ್ಡಂದಡ್ಕ: ರಸ್ತೆಯಲ್ಲಿ ನೋಟು ಪತ್ತೆ? ವೈರಲ್ ಆಗಿ ಆತಂಕ!

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕದ ರಾಜ್ಯಹೆದ್ದಾರಿಯಲ್ಲಿ ನೂರರ ಮೂರು ನೋಟು ಅನಾಥವಾಗಿ ಪತ್ತೆಯಾಗಿದೆ ಎಂಬ ಮಾಹಿತಿ ಸ್ಥಳೀಯರ ಆತಂಕದ ಜತೆ ಸ್ವಾರಸ್ಯಕರ ಮೂಡಿಸಿದ ವಿದ್ಯಾಮಾನ ಗುರುವಾರ ನಡೆಯಿತು.

ದೇಶದೆಲ್ಲೆಡೆ ಹರಡಿರುವ ಕೋವಿಡ್ ೧೯ ಸಾಂಕ್ರಾಮಿಕ ರೋಗವನ್ನು ಉದ್ದೇಶಪೂರ್ವಕವಾಗಿ ಕೆಲವರು ನೋಟಿಗೆ ಎಂಜಲು ಹಾಕಿ ಫಸರಿಸಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಅನಾಥವಾಗಿ ಬಿದ್ದಿದ್ದ ನೋಟನ್ನು ಎತ್ತಿಕೊಳ್ಳಲು ಜನ ಹಿಂದೇಟು ಹಾಕಿದ್ದರು. ಈ ಮಾಹಿತಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಥಳೀಯ ಪೊಲೀಸರು, ಪಂ. ಅಧಿಕಾರಿಗಳು ಗ್ರಾಮಕ್ಕೆ ತೆರಳಿದ್ದು ಆದರೆ ಗ್ರಾಮದಲ್ಲಿ ಯಾವುದೇ ನೋಟು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಯಾರಿಂದಲೋ ಕಿಸೆಯಿಂದ ಬಿದ್ದಿದ್ದು ಅಥವಾ ಯಾರೋ ಕಿಡಿಗೇಡಿಗಳು ನೋಟನ್ನು ಬಿಸಾಡಿ ಜಾಲತಾಣಗಳಲ್ಲಿ ವೀಡಿಯೋ ಮಾಡಿ ವೈರಲ್ ಮಾಡಿರಬೇಕೆಂದು ಶಂಕಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.