ಕಾಶಿಪಟ್ಣ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 40 ಕಿಂಟ್ವಾಲ್ ಅಕ್ಕಿ ಸಕ್ಕರೆ ಟೀ ಹುಡಿ ಸುಮಾರು 400 ಕುಟುಂಬಗಳಿಗೆ ವಿತರಣೆ

ಕೊವಿಡ್ 19ಕೊರೊನ ವೈರಸ್ ನಿಂದ ಬಡವರಿಗೆ, ಕೃಷಿ ಕೂಲಿ ಕಾರ್ಮಿಕರ ಜೀವನ ಸಾಗಿಸುವುದೇ ದುಸ್ತರವಾಗಿದ್ದ ಈ ಸಂಧರ್ಭದಲ್ಲಿ ಊರಿನ ದಾನಿಗಳು, ಸಾಮಾಜಿಕ ಸೇವಾ ಕಾರ್ಯಕರ್ತರ ನೆರವಿನಿಂದ ಕಾಶಿಪಟ್ಣ ಪಂಚಾಯತ್ ಎಲ್ಲಾ ಅರ್ಹ ಬಡಬಗ್ಗರಿಗೆ ಹಸಿವಿನಲ್ಲಿ ಇರಬಾರದೆಂದು ಪ್ರತಿವಾರ್ಡ್ ಗಳಲ್ಲಿ ಮನೆ ಮನೆಗೆ ಹೋಗಿ ದಿನಸಿಗಳನ್ನು ವಿತರಿಸಲಾಯಿತು.

ಸಾಂಕೆತಿಕವಾಗಿ ಚಾಲನೆ ನೀಡಿದ ಶ್ರೀ ಧರಣೇಂದ್ರ ಕುಮಾರ್ ಜಿ.ಪ ಸದಸ್ಯರು, ಶ್ರೀ ಸತೀಶ್ ಕೆ ಕಾಶಿಪಟ್ಣ ರವರ ನೇತ್ರತ್ವದಲ್ಲಿ ಪುಣ್ಯ ಯೋಜನೆ/ದಿನಸಿ ವಿತರಣೆಯನ್ನು ಅಭಿನಂದಿಸಿದರು.
ಕಾಶಿಪಟ್ಣ ಪಂಚಾಯತ್ ಅದ್ಯಕ್ಷ ಶ್ರೀ ಸತೀಶ್ ಕೆ ಕಾಶಿಪಟ್ಣರವರು ದಾನಿಗಳಿಗೆ ದನ್ಯವಾದವಿತ್ತರು.

ಈ ಸಂಧರ್ಭದಲ್ಲಿ ಶ್ರೀ ಮತಿ ಮಮತ ಪಂಚಾಯತ್ ಉಪಾದ್ಯಕ್ಷರು,ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಸುದೇವ ನಾಯಕ್, ಅಖ್ತರ್ ಅಹ್ಮದ್ ಹಾಸ್ಕೊ,ಪ್ರವೀನ್ ಪಿಂಟೊ, ಪಂಚಾಯತ್ ಸದಸ್ಯರು, ಶೇಕ್ ಲೆತೀಪ್,ಪೆರಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ, ರಾಜ್ ಪವಿ, ಪ್ರದೀಪ್ ಕೆ ಕಾಶಿಪಟ್ಣ,ವಿನ್ಸೆಂಟ್ ಮೆನೇಜೆಸ್, ಶ್ರಾವಣ್, ಅಬ್ದುಲ್ ರಹಿಮಾನ್, ಶ್ರೀಧರ್ ಶೆಟ್ಟಿ, ಹರೀಣ ಪೂಜಾರಿ, ಮನೊಜ್, ಸುಬ್ಬಣ್ಣ, ರಿಚಾರ್ಡ್ ಪಿಂಟೊ,ಜೊರ್ಜ್ ಮಿರಾಂಡ,ದುಬೈ ಹರೀಶ್ ಹೆಗ್ಡೆ ಪಡ್ಡಂದಡ್ಕ,ಇಸ್ಮಾಯಿಲ್ ಕೆ ಪೆರಿಂಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಮೊಹಮ್ಮದ್ ಶಾಪಿ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.