ಶ್ರೀಮತಿ ವಾರಿಜ ಆಚಾರ್ಯ ನಿಧನ

ಗೇರುಕಟ್ಟೆ ಕೊರಂಜ ದಿ. ಮೋನಪ್ಪ ಆಚಾರ್ಯರ ಪತ್ನಿ ವಾರಿಜ ಆಚಾರ್ಯ(85ವ) ಅಲ್ಪಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ಎ.23 ರಂದು ನಿಧನರಾದರು.

ಇವರು ಕುಟುಂಬದ ಮುಖ್ಯಸ್ಥರಾಗಿದ್ದು ಹಬ್ಬ ಹರಿದಿನಗಳ ಆಚರಣೆಯಲ್ಲಿ ವೃತನಿಷ್ಠರಾಗಿದ್ದ ಇವರು ಕಡುಬಡತನದ ದಿನದಲ್ಲಿ ತನ್ನ ಮಕ್ಕಳಿಗೆ ಶಿಕ್ಣಣವನ್ನು ಕೊಡಿಸಿದವರು.

ಮೃತರ ಮಕ್ಕಳು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಗೆಜೆಟೆಡ್ ಮ್ಯಾನೇಜರ್ ಹಿರಿಯ ಮಗ ಉಮೇಶ್ ಆಚಾರ್ಯ, ಬೆಂಗಳೂರಿನ ಗಾರ್ಮೆಂಟ್ ಸಂಸ್ಥೆಯ ಮ್ಯಾನೇಜರ್ ಕೆ ಸೋಮನಾಥ ಆಚಾರ್ಯ, ಉಪ್ಪಿನಂಗಡಿ ಸ.ಪ.ಕಾ.ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ, ಕ.ರಾ.ರ.ಸಾ‌.ಸಂಸ್ಥೆಯ ತಂತ್ರಜ್ಞ ಪ್ರಭಾಕರ ಆಚಾರ್ಯ, ಮಂಗಳೂರು ಕೆನರಾ ಜುವೆಲ್ಲರ್ಸ್ ರಾಜೇಶ ಆಚಾರ್ಯ, ಬೆಂಗಳೂರು ಗಾಮೆಂಟ್ಸ್ ಉದ್ಯೋಗಿ ಹರೀಶ್ ಆಚಾರ್ಯ, ಪುತ್ರಿಯರಾದ ವಸಂತಿ, ನಳಿನಿ ಹಾಗೂ ಬಂಧು ವರ್ಗವನ್ನುಅಗಲಿದ್ದಾರೆ.

ಮೃತರ ಹಿತೈಷಿಗಳು,ವಸಂತ ಮಜಲು, ಕೇಶವ ಬಂಗೇರ,ಸತೀಶ್ ಹಾಗೂ ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.