ಸುದ್ದಿ ಪೋನ್-ಇನ್ ಕಾರ್ಯಕ್ರಮದ ಪರಿಣಾಮ;; ಅವಘಡದಲ್ಲಿ ಮೃತರಾದ ಗ್ರಾ.ಪಂ ನೌಕರರಿಬ್ಬರಿಗೆ 1 ಕೋಟಿ ರೂ. ವಿಮೆ ಪರಿಹಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊರೊನಾ ನಿಯಂತ್ರಣ ಕರ್ತವ್ಯದ ಅವಧಿಯಲ್ಲಿ ರಸ್ತೆ ಅಪಘಾತ, ಅಥವಾ ಅವಘಡ ಮರಣಕ್ಕೆ ತುತ್ತಾದರೆ ತಲಾ 50 ಲಕ್ಷ ರೂ. ವಿಮೆ ಪರಿಹಾರ ನೀಡುವುದಾಗಿ ಘೋಶಿಸಿದ್ದರಿಂದ ಇದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್(ಆರ್‌ಡಿಪಿಆರ್) ಇಲಾಖೆಯ ಸಿಬ್ಬಂದಿಗಳಿಗೂ ಯೋಜನೆ ವಿಸ್ತಾರವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅವಘಡ ಮರಣಕ್ಕೆ ತುತ್ತಾದ ಇಬ್ಬರು ಸಿಬ್ಬಂದಿಗಳಿಗೆ 1 ಕೋಟಿ ರೂ. ಪರಿಹಾರ ಮೊತ್ತ ದೊರಕಲಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಮತ್ತು ಸೇನಿಟೈಸೇಶನ್ ವೇಳೆ ಮೃತಪಟ್ಟ ಇಬ್ಬರ ಕುಟುಂಬಕ್ಕೆ ಈ ವಿಮಾ ಪರಿಹಾರ ಮೊತ್ತವನ್ನು ದೊರಕಿಸಿಕೊಡಲು ಈಗಾಗಲೇ ನಮ್ಮ ಸಂಘದಿಂದ ಕ್ರಮಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್ ನೌಕರರ ಸಂಘದ (ಆರ್‌ಡಿಪಿಆರ್) ರಾಜ್ಯಾಧ್ಯಕ್ಷ, ಧರ್ಮಸ್ಥಳ ಗ್ರಾ.ಪಂ ಸಿಬ್ಬಂದಿ ಡಾ. ದೇವಿಪ್ರಸಾದ್ ಬೊಳ್ಮ ತಿಳಿಸಿದ್ದಾರೆ.

ಇದರಲ್ಲಿ ಅತ್ಯಂತ ಪ್ರಮುಖವಾದ ಭಾಗವೆಂದರೆ ಪ್ರಥಮ ಹಂತದಲ್ಲಿ ಈ ಸೌಲಭ್ಯ ಗ್ರಾ.ಪಂ ನೌಕರರಿಗೆ ಇಲ್ಲದಿದ್ದಾಗ ಸುದ್ದಿ ಬಿಡುಗಡೆ ಫೋನ್‌ಇನ್ ನೇರಪ್ರಸಾರದ ಯು-ಟೂಬ್ ಚಾನೆಲ್ ಮೂಲಕ ದೇವಿಪ್ರಸಾದ್ ಅವರು ಎತ್ತಿದ್ದ ಈ ಬೇಡಿಕೆಯ ಪ್ರಸಾರದ ವೀಡಿಯೋ ತುಣುಕನ್ನು ಸಂಬಂಧಪಟ್ಟ ಸಚಿವರು, ಸರಕಾರದ ಪ್ರಧಾನ ಕಾರ್ಯದರ್ಶಿ ಸಹಿತ ಅಗತ್ಯ ಇರುವವರ ಗಮನಕ್ಕೆ ತಂದುದರ ಪರಿಣಾಮವಾಗಿ, ಗ್ರಾಮೀಣಾಭಿವೃದ್ದಿ ಸಚಿವರು ಈ ಯೋಜನೆಯನ್ನು, ಕೊರೋನಾ 

ವಿರುದ್ಧದ ಹೋರಾಟದಲ್ಲಿ ತೊಡಗಿರುವ ಎಲ್ಲಾ  ಇಲಾಖೆಗಳಿಗೂ ವಿಸ್ತರಿಸಿ ಮರು ಪ್ರಕಟಣೆ ನೀಡಿದ್ದರಿಂದ ಇದು ಸಾಧ್ಯವಾಗಿದೆ ಎಂದು ಸ್ವತಃ ಡಾ. ದೇವಿಪ್ರಸಾದ್ ಬೊಳ್ಮ ಅವರು “ಸುದ್ದಿ”ಗೆ ತಿಳಿಸಿದ್ದಾರೆ.

ರಾಜ್ಯಾಧ್ಯಂತ 62 ಸಾವಿರ ಗ್ರಾ.ಪಂ ಸಿಬ್ಬಂದಿಗಳು:

ಕೊರೊನಾ ವಿರುದ್ಧದ ಯುದ್ಧದಲ್ಲಿ ಭಾಗಿಯಾಗುವ  ಸರಕಾರಿ ಇಲಾಖೆಯ ಸಿಬ್ಬಂದಿಗಳ ಪೈಕಿ ಮೊದಲ ಹಂತದಲ್ಲಿ ವೈದ್ಯರು ಸೇರಿದಂತೆ ಇತರ ಪ್ರಮುಖ ಇಲಾಖೆ ನೌಕರರ ಪ್ರಾಣರಕ್ಷಣೆಗಾಗಿ ಮಾತ್ರ ಈ 50 ಲಕ್ಷ ರೂ. ವಿಮೆ ನೀಡುವ ಬಗ್ಗೆ ಸರಕಾರ ಪ್ರಕಟಿಸಿತ್ತು. ಆದರೆ ಆರೋಗ್ಯ ಇಲಾಖೆ ಸೇರಿದಂತೆ ಪ್ರತೀ ಗ್ರಾಮ ಪಂಚಾಯತ್ ಮಟ್ಟದ ಕಾರ್ಯಪಡೆಯಲ್ಲಿ ಕೊರೊನಾ ವಿಚಾರವಾಗಿ ಆರ್‌ಡಿಪಿಆರ್ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟು 62 ಸಾವಿರ ಸಿಬ್ಬಂದಿಗಳಿದ್ದಾರೆ. ಅವರಿಗೂ ಈ ವಿಮೆಯ ಸೌಲಭ್ಯ ದೊರೆಯುವಂತಾಗಬೇಕು ಎಂದು ಅವರು ಸುದ್ದಿಯ ಯುಟೂಬ್ ಚಾನೆಲ್‌ನಲ್ಲಿ ಸರಕಾರವನ್ನು ಒತ್ತಾಯಿಸಿದ್ದರು.

ಇದರ ವೀಡಿಯೋ ತುಣುಕನ್ನು ಅವರು ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ, ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಸರಕಾರದ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್, ಸರಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ  ಎಲ್. ಕೆ ಅತೀಕ್, ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆರೋಗ್ಯ ಸಚಿವ ಶ್ರೀರಾಮುಲು, ಮೊದಲಾದವರಿಗೆಲ್ಲರಿಗೂ ಶೇರ್ ಮಾಡಿದ್ದರು. ಇದನ್ನು ಪರಿಗಣಿಸಿದ ಸಚಿವ ಈಶ್ವರಪ್ಪ ಅವರು ಈ ಯೋಜನೆಯನ್ನು ಎಲ್ಲಾ ಇಲಾಖೆಗಳಿಗೂ ಅನ್ವಯವಾಗಲಿದೆ ಎಂದು ಪ್ರಕಟಿಸಿದ್ದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ನ ಅಡಿ  ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೂಲಕ ಈ ವಿಮೆ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ.

ದೊರೆಯಲಿದೆ ಇಬ್ಬರು ಅವಘಡ ಮರಣಕ್ಕೆ ತುತ್ತಾದವರಿಗೆ 1 ಕೋಟಿ ರೂ. ವಿಮೆ ಮೊತ್ತ:

ತಿಪಟೂರು ಗ್ರಾ.ಪಂ. ಬಿಲ್‌ಕಲೆಕ್ಟರ್ ದಯಾನಂದ ಅವರು ಕೊರೊನಾ ಮುಂಜಾಗೃತಾ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಮಾರುತಿ ಓಮ್ನಿ ವ್ಯಾನ್ ಮತ್ತು  ಬೈಕ್ ನಡುವೆ ನಡೆದಿದ್ದ ಅಪಘಾತದಲ್ಲಿ ಮೃತಪಟ್ಟರೆ, ಮಂಡ್ಯ ಜಿಲ್ಲೆಯ ಮಲವಳ್ಳಿ ಗ್ರಾಮದ ಕಿರುಗಾವಲು ಕಲ್ಕುಳಿ ಗ್ರಾ.ಪಂ ಪೌರ ಕಾರ್ಮಿಕರೊಬ್ಬರು ಸೇನಿಟೇಸೇಸರ್ ಸಿಂಪಡಣೆಯ ವೇಳೆ ಆಕಸ್ಮಿಕ ಮರಣಕ್ಕೆ ತುತ್ತಾಗಿದ್ದು, ಸರಕಾರದ ಸೂಚನೆಯಂತೆ ಈ ಇಬ್ಬರಿಗೂ ಸದ್ರಿ ಪ್ರಕಟಿತ ಮೊತ್ತವನ್ನು ಸರಕಾರದಿಂದ ದೊರಕಿಸಿಕೊಡುವಲ್ಲಿ ನಾವು ಪ್ರಯತ್ನಿಸುವುದಾಗಿ ಆರ್‌ಡಿಪಿಆರ್ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ತಿಳಿಸಿದ್ದಾರೆ.

++++++++++

ಸುದ್ದಿ ಬಿಡುಗಡೆ ಪತ್ರಿಕೆ ತಮ್ಮ ಫೋನ್ ಇನ್ ಕಾರ್ಯಕ್ರಮದಲ್ಲಿ ನಮ್ಮನ್ನು ಮಾತನಾಡಿಸಿದ್ದರಿಂದ ನಮ್ಮ ಬೇಡಿಕೆಯನ್ನು ಹೇಳಿಕೊಳ್ಳಲು ಅವಕಾಶವಾಯಿತು. ಜೊತೆಗೆ ಸರಕಾರಕ್ಕೆ ಪತ್ರ ಬರೆದು ಕೂಡ ನಾವು ಗಮನಸೆಳೆದಿದ್ದೆವು. ಸುದ್ದಿ ಚಾನೆಲ್‌ನ ನ್ಯೂಸ್ ವೀಡಿಯೋ ತುಣಕನ್ನು ನಾವು ಎಲ್ಲರಿಗೂ ಸಿಗುವಂತೆ ಮಾಡಿದ್ದರಿಂದ ನಮ್ಮ ಬೇಡಿಕೆ ಈಡೇರಲು ಸುಲಭಸಾಧ್ಯವಾಯಿತು. ಸುದ್ದಿಯ ಈ ಮಹಾ ಕೊಡುಗೆಗೆ ನಾವು ಎಂದೂ ಅಭಾರಿಯಾಗಿರುತ್ತೇವೆ.

——–
ಡಾ. ದೇವಿಪ್ರಸಾದ್ ಬೊಳ್ಮ ಧರ್ಮಸ್ಥಳ
ರಾಜ್ಯಾಧ್ಯಕ್ಷರು, ಗ್ರಾ.ಪಂ ನೌಕರರ (ಆರ್‌ಡಿಪಿಆರ್) ಸಂಘ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.