ಟೆಂಪೊ, ಪಿಕ್ ಅಪ್ ವಾಹನಗಳ ಚಾಲಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿ ಖರೀದಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿರುವ ಟೆಂಪೊ, ಪಿಕ್ ಅಪ್ ವಾಹನಗಳ ಚಾಲಕರಿಗೆ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಅವರು ಅಗತ್ಯ ದಿನಸಿ ಸಾಮಾಗ್ರಿಗಳ ಆಹಾರ ಕಿಟ್‍ನ್ನು ವಿತರಿಸಿದರು.

ಬೆಳ್ತಂಗಡಿ ಸಂತೆಕಟ್ಟೆಯ ಟೆಂಪೊ ನಿಲ್ದಾಣ ಬಳಿಯಲ್ಲಿ ಎ.22ರಂದು ಟೆಂಪೊ, ಪಿಕ್ ಅಪ್ ವಾಹನಗಳ ಚಾಲಕರು ದೈನಂದಿನ ಬಾಡಿಗೆಯ ಮುಖಾಂತರ ಆದಾಯಗಳಿಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಅಗತ್ಯ ದಿನಸಿ ಸಾಮಾಗ್ರಿಗಳ ಖರೀದಿಗೆ ತೊಂದರೆ ಉಂಟಾಗಿದೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷರಾದ ಶೈಲೇಶ್ ಕುಮಾರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ಕೆಪಿಸಿಸಿ ಎಸ್ಸಿ ಘಟಕ ನಾಗರಾಜ್.ಎಸ್ ಲಾಯಿಲ, ಬ್ಲಾಕ್ ಕಾಂಗ್ರೆಸ್‍ನ ಎಸ್ಸಿ ಘಟಕ ಅಧ್ಯಕ್ಷ ಬಿ.ಕೆ ವಸಂತ್, ನಗರ ಪಂಚಾಯತ್ ಸದಸ್ಯ ಡಿ.ಜಗದೀಶ್, ಮೆಹಬೂಬ್, ಶಂಕರ್ ಹೆಗ್ಡೆ ಕುತ್ಯಾರು, ಸತೀಶ್ ನಾಯ್ಕ ರೆಂಕೆದಗುತ್ತು, ಲಕ್ಷಣ ಪೂಜಾರಿ, ಸತೀಶ್ ನಾಯ್ಕ ದೊಡ್ಡ ಮನೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.