ಲಾಯಿಲ ಪೆಟ್ರೋಲ್ ಪಂಪ್ ಬಳಿಯ ಹೊಟೇಲ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಅಗ್ನಿ ಅವಘಡ

  • ಹೆಚ್ಚಿನ ಅನಾಹುತ ತಪ್ಪಿಸಿದ ಸ್ಥಳೀಯರು, ಅಗ್ನಿ ಶಾಮಕ ದಳದ ಸಿಬ್ಬಂದಿ

ಲಾಯಿಲ: ಇಲ್ಲಿನ ಸೈಂಟ್ ಮೇರಿಸ್ ಶಾಲೆ ಎದುರಿನ ಪೆಟ್ರೋಲ್ ಪಂಪ್ ಬಳಿಯ ರಾಜೇಶ್ ಮಾಲಕತ್ವದ ಹೋಟೆಲ್ ಪ್ರಿಯಾಗೆ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

ಲಾಕ್‍ಡೌನ್‍ನಿಂದಾಗಿ ಒಂದು ತಿಂಗಳಿನಿಂದ ಹೋಟೆಲ್ ಮುಚ್ಚಲ್ಪಟ್ಟಿತ್ತು. ಎ.22ರಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಅಗ್ನಿ ಅನಾಹುತವಾಗಿದೆ. ಅಲ್ಲೇ ಪಕ್ಕದಲ್ಲಿದ್ದ ಪೆಟ್ರೋಲ್ ಪಂಪ್‍ನವರು ಮಾಹಿತಿ ತಿಳಿಸಿದ ಮೇರೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಬೆಂಕಿ ಅನಾಹುತವನ್ನು ತಪ್ಪಿಸಿದರು. ಹೊಟೇಲ್ ಮಾಲೀಕ ರಾಜೇಶ್ ಕುಟುಂಬವು ಕೊಯ್ಯೂರು ಕ್ರಾಸಿನ ವಿಮುಕ್ತಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಹೋಟೆಲ್ ಪ್ರಿಯಾದಿಂದ ಕೇವಲ 25 ಮೀ. ಅಂತರದಲ್ಲಿ ಪೆಟ್ರೋಲ್ ಪಂಪ್ ಇರುವುದರಿಂದ ಈ ಬೆಂಕಿ ಅನಾಹುತವು ಸ್ಥಳೀಯರಲ್ಲಿ ಆಂತಕಕ್ಕೆ ಕಾರಣವಾಗಿತ್ತು. ಈ ವೇಳೆ ಬೆಂಕಿ ನಂದಿಸುವಲ್ಲಿ ಲಾಯಿಲ ಪಂಚಾಯತ್ ನಿವೃತ್ತ ಪಂಪ್ ಚಾಲಕ ಸೇರಿದಂತೆ ಸ್ಥಳೀಯರು ಸೇರಿ ಸಹಕರಿಸಿದರು.

ಈ ಸಂದರ್ಭದಲ್ಲಿ ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ತಾಲೂಕು ಪಂಚಾಯತ್ ಸದಸ್ಯ ಸುಧಾಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣ ರಾಜ, ಕಾರ್ಯದರ್ಶಿ ರೇಷ್ಮಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.