ಕ್ಯಾಥೆಡ್ರಲ್ ದೇವಾಲಯ: ಆಹಾರದ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಎ. 21 ರಂದು ಡಿ.ಕೆ.ಆರ್.ಡಿ.ಎಸ್. (ರಿ.) ಬೆಳ್ತಂಗಡಿ ಇದರ ವತಿಯಿಂದ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ಬೆಳ್ತಂಗಡಿ ಇದರ ಮೂಲಕ ಕೋವಿಡ್ 19 ಆಹಾರದ ಕಿಟ್ ವಿತರಣೆಯು ಚರ್ಚ್ ಆವರಣದಲ್ಲಿ ನಡೆಯಿತು.
ಸಂಘದ ಆಯ್ದ ಸದಸ್ಯರಿಗೆ ಮತ್ತು ಇತರ ಬಡ ಕುಟುಂಬಗಳಿಗೆ ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಮೂಲಕ ಆಹಾರದ ಕಿಟ್ ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ವಂ|ಫಾ| ಬಿನೋಯಿ ವಿ.ಜೆ ಇವರು ಕೋವಿಡ್-೧೯ ಹರಡುವಿಕೆ ತಡೆಗಟ್ಟುವ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪೊಪ್ರೆಟರ್ ವಂ|ಫಾ| ಅಬ್ರಾಹಂ ಪಟ್ಟೇರಿಲ್, ಜ್ಞಾನ ನಿಲಯದ ನಿರ್ದೇಶಕರಾದ ವಂ|ಫಾ| ಟೋಮಿ ಮಟ್ಯತ್ತಿಲ್ ಇವರು ಉಪಸ್ಥಿತರಿದ್ದರು.  ಸೈಂಟ್ ಲಾರೆನ್ಸ್ ಚರ್ಚ್‌ನ ಧರ್ಮಗುರುಗಳಾದ ವಂ|ಫಾ|ತೋಮಸ್ ಕಣ್ಣಾಂಗಲ್ ಇವರು ಪ್ರಸ್ತಾವಣೆಗೈದು ಸ್ವಾಗತಿಸಿ ವಂದಿಸಿದರು. ಈ ದಿನ ೩೬ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ಕಿಟ್ ವಿತರಣಾ ಸಂದರ್ಭ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.