410 ಪೊಲೀಸ್ ಸಿಬ್ಬಂದಿಗಳಿಗೆ ಎಂ.ಎಲ್.ಸಿ ಹರೀಶ್ ಕುಮಾರ್ ರಿಂದ ಆಹಾರ ಕಿಟ್ ವಿತರಣೆ

 ಬೆಳ್ತಂಗಡಿ: ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಬೆಳ್ತಂಗಡಿ, ಧರ್ಮಸ್ಥಳ, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ, ಪುಂಜಾಲಕಟ್ಟೆ ಹಾಗೂ ವೇಣೂರು ಠಾಣೆಯ 410 ಸಿಬಂದಿಗಳಿಗೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರು ಎ.21ರಂದು ದಿನ ಬಳಕೆಯ ಆಹಾರ ಕಿಟ್‍ಗಳನ್ನು ವಿತರಿಸಿದರು.

ಕೋರೊನಾ ವೈರಸ್ ತಡೆಗಟ್ಟುವ ಸರಕಾರದ ಕಾರ್ಯಪಾಲನೆಯಲ್ಲಿ ಪೊಲೀಸ್ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಬಗ್ಗೆ ಹರೀಶ್ ಕುಮಾರ್ ಶ್ಲಾಘನೆ ವ್ಯಕ್ತ ಪಡಿಸಿದರು. ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್ ಕುಮಾರ್, ಎಸ್.ಐ ನಂದಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೊಡಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಕೆ.ಪಿ.ಸಿ.ಸಿ ಎಸ್ಸಿ ಘಟಕದ ರಾಜ್ಯ ಸಮಿತಿಯ ಸದಸ್ಯ ನಾಗರಾಜ್ ಎಸ್. ಲಾಯಿಲ, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ. ಕೆ. ವಸಂತ, ಅಲ್ಪ ಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಖಾಲಿದ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಪ್ರಭಾಕರ್ ಶಾಂತಿಕೋಡಿ, ಅಲ್ಪ ಸಂಖ್ಯಾತ ಘಟಕದ ಮುಖಂಡ ಎ.ಜೆ.ಅಜಯ್ಉಪಸ್ದಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.