ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳಿಂದ ಅಶಕ್ತರಿಗೆ ಅಗತ್ಯ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಯವರು ತಮ್ಮ ಠಾಣಾ ವ್ಯಾಪ್ತಿಯ ಪ್ರತೀ ಗಸ್ತಿನ 2 ಅಶಕ್ತ ಕುಟುಂಬಗಳಂತೆ ಒಟ್ಟು 70 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಅವರವರ ಮನೆಗಳಿಗೆ ಎ.21 ರಂದು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಜನಸ್ನೇಹಿ ಪೊಲೀಸ್ ವ್ಯವಸ್ಥೆಯಂತೆ ಬೆಳ್ತಂಗಡಿ ಪಿಎಸ್‍ಐ ನಂದಕುಮಾರ್ ಎಂ.ಎಂ. ರವರ ನೇತೃತ್ವದಲ್ಲಿ ಠಾಣಾ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಯವರು ತಮ್ಮ ವೇತನದಿಂದ ಹಣ ಹಾಕಿ ಅಗತ್ಯ ವಸ್ತುಗಳ ಕಿಟ್ ತಯಾರಿಸಿ ಹಂಚಿಕೆ ಮಾಡಿ ಸಮಾಜದ ರಕ್ಷಣೆಯ ಜೊತೆಗೆ ಸೇವಾ ಮನೋಭಾವನ್ನು ಮೆರೆದಿದ್ದಾರೆ.
ಕೋವಿಡ್- 19 ತಡೆಗಟ್ಟಲು ಸರಕಾರದ ಆದೇಶದಂತೆ ಕಳೆದ ಒಂದು ತಿಂಗಳಿನಿಂದ ಅವಿರತ ಶ್ರಮಿಸುತ್ತಿರುವ ಬೆಳ್ತಂಗಡಿ ಪೊಲೀಸರು ಠಾಣಾ ವ್ಯಾಪ್ತಿಯ ಅಶಕ್ತ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ತೃಪ್ತಿಕರವಾದ ಸೇವೆ ಮಾಡಿರುವುದು ಠಾಣಾ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಹೆಮ್ಮೆ ಎನಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.