ಎ.23ರಂದು 243 ಬೂತುಗಳಲ್ಲಿ 30 ಸಾವಿರ ಆಹಾರ ಕಿಟ್ ವಿತರಣೆ: ಶಾಸಕ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಎ.23ರಂದು ತಾಲೂಕಿನ 243 ಬೂತುಗಳಲ್ಲಿ ಏಕಾಕಾಲದಲ್ಲಿ 30 ಸಾವಿರ ಆಹಾರ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಎ.21ರಂದು ಉಜಿರೆ ಜನಾರ್ದನ ದೇವಸ್ಥಾನದ ಬಳಿಯ ಸಭಾಂಗಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಸುಮಾರು 30 ಸಾವಿರ ಕಿಟ್‍ಗಳಲ್ಲಿ 24 ಸಾವಿರ ಬೂತುಗಳ ಮೂಲಕ ವಿತರಣೆಯಾಗಲಿದೆ. ಉಳಿದ 3000 ದಷ್ಟು ಕಿಟ್‍ಗಳು ರಿಕ್ಷಾ ಚಾಲಕರಿಗೆ, ಗೃಹರಕ್ಷಕದಳದವರಿಗೆ, ಒಂದಷ್ಟು ಕಿಟ್ ಆಶಕ್ತರಿಗೆ ನೀಡಲಿದ್ದೇವೆ ಎಂದರು.


ಈಗಾಗಲೇ ಬದುಕುಕಟ್ಟೋಣ ತಂಡ ಕಳೆದ 7 ದಿನಗಳಿಂದ ಶಿಸ್ತು ಮತ್ತು ಶುಚಿತ್ವ ಬದ್ಧವಾಗಿ ಕಿಟ್ ತಯಾರಿಸುತ್ತಿದ್ದಾರೆ. ಭಾಜಪದ ಕಾರ್ಯಕರ್ತರು, ಬೂತು ಸಮಿತಿಯವರು ಈಗಾಗಲೇ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮಾಡುತ್ತಾರೆ. ಒಂದು ಬೂತುನಲ್ಲಿ 100 ಕಿಟ್ ವಿತರಣೆ ನಡೆಯಲಿದೆ. ಒಂದೇ ದಿವಸ ಸಮಾಜಿಕ ಅಂತರವನ್ನು ಕಾಪಾಡಿಕೊಂಡು ಎಲ್ಲಾ ಬೂತುಗಳಲ್ಲಿ ವಿತರಣೆ ಮಾಡುವ ಕಾರ್ಯ ನೆರವೇರುತ್ತದೆ ಎಂದು ತಿಳಿಸಿದರು.
ವಿತರಣಾ ಕಾರ್ಯಕ್ರಮದಲ್ಲಿ ಸಂಸದ ನಳಿನ್‍ಕುಮಾರ್ ಕಟೀಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ನಾ.ಸೀತಾರಾಮ್, ಉಜಿರೆ ದೇವಸ್ಥಾನದ ಶರತ್‍ಕೃಷ್ಣ ಪಡ್ವೆಟ್ನಾಯ ಭಾಗವಹಿಸುವ ನಿರೀಕ್ಷೆಯಿದೆ. ಬೂತು ಮಟ್ಟದ ಅಧ್ಯಕ್ಷರ ನೇತೃತ್ವದಲ್ಲಿ ವಿತರಣೆ ನಡೆಯುತ್ತದೆ. ಒಂದು ಕಿಟ್‍ನಲ್ಲಿ ಅಕ್ಕಿ ಸೇರಿದಂತೆ 7 ಬಗೆಯ ಆಹಾರ ಪದಾರ್ಥಗಳಿದ್ದು, ಒಟ್ಟು 150 ಟನ್ ಅಕ್ಕಿ ಮತ್ತು 90 ಟನ್ ಆಹಾರ ಪದಾರ್ಥ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಉದ್ಯಮಿಗಳಾದ ರಾಜೇಶ್ ಪೈ, ಮೋಹನ್ ಕುಮಾರ್, ರವಿಚಕ್ಕಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.