ಸೋಮವತಿ ನದಿಗೆ ವಿಷ ಹಾಕಿ ಮೀನು ಹಿಡಿಯಲು ಯತ್ನ ಪೊಲೀಸರ ಕಂಡು ಪರಾರಿಯಾದ ಕಿಡಿಗೇಡಿಗಳ ತಂಡ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತದ ಕುಡಿಯುವ ನೀರಿನ ಪಂಪುಹೌಸ್ ಬಳಿಯ ಸೋಮವತಿ ನದಿಯ ಗುಂಡಿಯಲ್ಲಿ ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ವಿಷ  ಹಾಕಿ ಮೀನು ಹಿಡಿಯಲು ಯತ್ನಿಸಿ ನೀರನ್ನು ಕುಲುಷಿತಗೊಳಿಸಿದ ಪರಿಣಾವಾಗಿ ಮೀನುಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ರಾತ್ರಿ ಸುಮಾರು 10 ಗಂಟೆಯ ನಂತರ ಸುಮಾರು ಐದಾರು ಮಂದಿಯ ತಂಡ ನಗರ ಪಂಚಾಯತಕ್ಕೆ ನೀರು ಸರಬರಾಜು ಮಾಡುವ ರಾಘವೇಂದ್ರ ಮಠದ ಸಮೀಪ ಪಂಪು ಹೌಸ್ ಬಳಿ ಸೋಮವತಿ ನದಿಗೆ ಹಾಕಿ ಮೀನು ಹಿಡಿಯಲು ಯತ್ನಿಸಿದರೆನ್ನಲಾಗಿದೆ. ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಬೆಳ್ತಂಗಡಿ ಠಾಣೆಯ ಎಸ್.ಐ ನಂದಕುಮಾರ್ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿದಾಗ ಕಿಡಿಗೇಡಿಗಳು ಕತ್ತಲಲ್ಲಿ ಪರಾರಿಯಾದರೆಂದು ತಿಳಿದು ಬಂದಿದೆ. ನದಿಗೆ     ಮೈಲ್ ತುತ್ತು   ಹಾಕಿದರೇ ಅಥವಾ ವಿಷ ಪದಾರ್ಥ ಬೆರೆಸಿದರೆ ಎಂಬುದು ಖಚಿತಗೊಂಡಿಲ್ಲ. ಆದರೆ ಗುಂಡಿಯಲ್ಲಿದ್ದ ಬಹುತೇಕ ದೊಡ್ಡ ಮೀನುಗಳು ಸತ್ತು ಹೋಗಿ ನೀರಿನಲ್ಲಿ ತೇಲಾಡುತ್ತಿದ್ದುದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಮುಖ್ಯಾಧಿಕಾರಿ ಸುಧಾಕರ್, ನ.ಪಂ ಸದಸ್ಯ ಶರತ್ ಕುಮಾರ್ ಭೇಟಿ ನೀಡಿದ್ದಾರೆ. ಈ ಗುಂಡಿಯ ನೀರನ್ನು ನಗರದ ಜನರಿಗೆ ಕುಡಿಯಲು ಉಪಯೋಗಿಸುತ್ತಿದ್ದು, ಇದನ್ನು ಈಗ ಸ್ಥಗಿತಗೊಳಿಸಲಾಗಿದೆ. ನೀರನ್ನು ಶುದ್ಧೀಗೊಳಿಸಲು ಬ್ಲೀಚಿಂಗ್ ಹಾಕಲಾಗಿದೆ ಎಂದು ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.