ಕಕ್ಕಿಂಜೆ: 3.20 ಲಕ್ಷ ಕಳವಾಗಿದೆ ಎಂದು ಸ್ಥಳೀಯ ಭಿನ್ನಕೋಮಿನ ಇಬ್ಬರ ಹೆಸರೇಳಿ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿ ಸಿಕ್ಕಿಬಿದ್ದ ಪ್ರಕರಣ

ಕಕ್ಕಿಂಜೆ: ತನ್ನ ಅಂಗಡಿಯಿಂದ 3.20 ಲಕ್ಷ ರೂ. ನಗದು ಕಳವಾಗಿದೆ. ಅದನ್ನು ಸ್ಥಳೀಯ ಇಬ್ಬರು ಕದ್ದಿರುವ ಶಂಕೆ ಇದೆ ಎಂದು ಕಕ್ಕಿಂಜೆಯ ಜನರಲ್ ಸ್ಟೋರ್‍ಸ್ ಮಾಲಕರೊಬ್ಬರು ಪೊಲೀಸರಿಗೆ ಸುಳ್ಳು ದೂರು ನೀಡಿ ಯಾಮಾರಿಸಲು ಯತ್ನಿಸಿ ಕೊನೆಗೆ ತಾನೇ ಸಿಕ್ಕಿಬಿದ್ದ ಘಟನೆ ಕಕ್ಕಿಂಜೆಯಲ್ಲಿ ನಡೆದಿದೆ.

ಇದು ಕೊರೊನಾ ವೈರಸ್ ಹಬ್ಬುತ್ತಿರುವ ಮಧ್ಯೆ ಕಕ್ಕಿಂಜೆಯಂತಹಾ ಸೂಕ್ಷ್ಮ ಪ್ರದೇಶದಲ್ಲಿ ಕೋಮು ವೈರಸ್ ಹಬ್ಬಲು ಯತ್ನಿಸಿದ ವಿಲಕ್ಷಣಕಾರಿ ಘಟನೆಯಾಗಿದೆ. ಕಕ್ಕಿಂಜೆಯಲ್ಲಿ ದಿನಸಿ ವಸ್ತುಗಳ ಮಾರಾಟದ ಅಂಗಡಿ ಹೊಂದಿರುವ ವ್ಯಕ್ತಿ, ತನ್ನ ಅಂಗಡಿಯಿಂದ ದೊಡ್ಡ ಮೊತ್ತ ಕಳವಾಗಿದೆ ಎಂದು ಕಥೆ ಕಟ್ಟಿದ್ದರು. ಅಂಗಡಿ ಪಕ್ಕದ ಇಬ್ಬರು ಮುಸ್ಲಿಂ ಯುವಕರ ಬಗ್ಗೆ ಸಂದೇಹವಿದೆ ಎಂದೂ ಅವರು ತಿಳಿಸಿ ಪೊಲೀಸ್ ದೂರು ನೀಡಿದ್ದರು.

ತನ್ನ ಕುಟುಂಬದಲ್ಲಿ ಕಲಹ ಉಂಟಾದಾಗ ಅದನ್ನು ಗೌಣವಾಗಿಸಲು ಮತ್ತು ಕುಟುಂಬಸ್ಥರ ಗಮನವನ್ನು ಬೇರೆಡೆಗೆ ಸೆಳೆಯಲು ಹೊಸ ಉಪಾಯ ಹೂಡಿ, ಇದನ್ನು ಅನ್ಯಕೋಮಿನ ವ್ಯಕ್ತಿಗಳ ತಲೆಗೆ ಕಟ್ಟಲು ಅವರು ಸಂಚು ರೂಪಿಸಿದ್ದರು. ಆದರೆ ಇಷ್ಟರಲ್ಲೇ ಸದ್ರಿ ದೂರಿನ ಹಿಂದೆ ಏನೋ ಇದೆ ಎಂಬ ಅನುಮಾನದಿಂದ ಬೆಳ್ತಂಗಡಿಯ ಸಿಂಗಂ ಸರ್ಕಲ್ ಇನ್ಸ್‌ಪೆಕ್ಟ್‌ರ್ ಸಂದೇಶ್ ಪಿ.ಜಿ ಅವರು ಪ್ರಕರಣವನ್ನು ಸಂದರ್ಭೋಚಿತವಾಗಿ ತನ್ನ ಪೊಲೀಸ್ ಕೌಶಲ್ಯ ಪ್ರಯೋಗಿಸಿ ಭೇದಿಸಿದ್ದಾರೆ. ಪೊಲೀಸ್ ಲಾಠಿಯ ರುಚಿ ತಿಂದ ಅಂಗಡಿ ಮಾಲಿಕ ಕೊನೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಮುಂದೆ ಸತ್ಯ ಬಿಚ್ಚಿಟ್ಟು ಬೆತ್ತಲಾದ ಘಟನೆ ನಡೆದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.