ಉಜಿರೆ ಅತ್ತಾಜೆ ಮಸ್ಜಿದ್ ಆಡಳಿತ ಮಂಡಳಿ ಸದಸ್ಯ ಯೂಸುಫ್ ಅತ್ತಾಜೆ ನಿಧನ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಎಸ್‌ವೈಎಸ್ ಅತ್ತಾಜೆ ಬ್ರಾಂಚ್ ಕೋಶಾಧಿಕಾರಿ, ಅರಫಾ ಜಾಮಿಯಾ ಮಸ್ಜಿದ್ ಅತ್ತಾಜೆ ಇದರ ಸ್ವಲಾತ್ ಸಮಿತಿ ಅಧ್ಯಕ್ಷರು, ಮಸ್ಜಿದ್ ಅಡಳಿತ ಸಮಿತಿ ಸದಸ್ಯರಾಗಿದ್ದ ಯೂಸುಫ್ ಅತ್ತಾಜೆ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅತ್ತಾಜೆ ಮಸೀದಿ, ಮದರಸದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಸಕ್ರೀಯರಾಗಿದ್ದು, ಧಾರ್ಮಿಕ ವಿಚಾರಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿದ್ದ ಯೂಸುಫ್ ಅವರು ಎದೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ಸಾರಮ್ಮ, ಮಕ್ಕಳಾದ ಮೌಲಾನಾ ಮುಸ್ತಫ ಕಮಲ್, ಫಾರೂಕ್, ಆಸಿಫ್, ಶಬೀರ್, ಬಶೀರ್, ನಿಸಾರ್, ಸಾದಿಕ್ ಮತ್ತು ಆಯಿಶಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಓರ್ವ ಪುತ್ರ ಅನ್ಸಾರ್ ಈ ಹಿಂದೆಯೇ ಅನಾರೋಗ್ಯದಿಂದ ನಿಧನಹೊಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.