ಕಾಶಿಪಟ್ಣದ 50 ದಲಿತ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಕಾಶಿಪಟ್ಣ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿ ಖರೀದಿಸಲು ಸಂಕಷ್ಟಕ್ಕೆ ಒಳಗಾದ 50 ದಲಿತ ಬಡ ಕುಟುಂಬಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಕಾಶಿಪಟ್ಣದ ಗ್ರಾಮ ಸಮಿತಿಯಿಂದ ಅಗತ್ಯ ದಿನ ಬಳಕೆಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.


ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸುವಲ್ಲಿ ಸಹಕರಿಸಿದ ದಲಿತ ಸಂಘರ್ಷ ಸಮಿತಿ ಸಂಚಾಲಕ ಮತ್ತು ಪೆರಾಡಿ ಸಿ. ಎ. ಬ್ಯಾಂಕ್‍ನ ನಿರ್ದೇಶಕ ಕೃಷ್ಣಪ್ಪ ಕಿರೋಡಿ, ಸಮಿತಿಯ ಸಂಘಟನಾ ಸಂಚಾಲಕ ಸುಂದರ (ನಮ್ಮಿ) ನೆಲ್ಲಿಗುಡ್ಡೆ, ಕಾಶಿಪಟ್ಣ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಹಾಗೂ ಖಜಾಂಜಿ ಸಂಜೀವ ನೆಲ್ಲಿಗುಡ್ಡೆ, ಮಾಜಿ ಸಂಚಾಲಕ ರಾಜೇಶ್ ಎಂ. ಕೆ ಕೇದಿಗೆ, ಮಂಗಳೂರು ಇಎಸ್‍ಐ ಆಸ್ಪತ್ರೆಯ ವಾಸು.ಪಿ, ಅಂಚೆ ಪಾಲಕ ರಮೇಶ್, ಕಾಶಿಪಟ್ಣದ ಬಾಬು.ಡಿ, ವಸಂತ ನಾಯ್ಕ ನೆಲ್ಲಿಗುಡ್ಡೆ, ಆಟೋ ಚಾಲಕ  ಕೃಷ್ಣಪ್ಪ ಕೇದಿಗೆ, ದಿನೇಶ್ ನಾಯ್ಕ ನೆಲ್ಲಿಗುಡ್ಡೆ ಇದ್ದರು. ಆಹಾರ ಸಾಮಾಗ್ರಿಗಳ ವಿತರಣೆಯನ್ನು ಶ್ರೀನಿಧಿ ಜನರಲ್ ಸ್ಟೋರ್‍ನ ವಾಹನದಲ್ಲಿ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.