ಅರ್ಹ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ಅಡುಗೆ ಅನಿಲ ವಿತರಣೆಯನ್ನು ಮುಂದುವರಿಸಲು ಒತ್ತಾಯಿಸಿ ಮನವಿ

ವೇಣೂರು: ಇಲ್ಲಿನ ಗ್ರಾ.ಪಂ.ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದಂತೆ ಅರ್ಹ ಬಡ ಕುಟುಂಬಗಳಿಗೆ ವೇಣೂರು ಅರಣ್ಯ ಇಲಾಖೆಯಿಂದ ವಿತರಿಸುತ್ತಿದ್ದ ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡುವುದನ್ನು ಈ ಮೊದಲಿನಂತೆ ಮುಂದುವರಿಸುವಂತೆ ವೇಣೂರು ಪಂಚಾಯತ್‍ನ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯ ಅನೂಪ್.ಜೆ ಪಾಯಸ್ ನೇತೃತ್ವದ ಪಂಚಾಯತ್ ಸದಸ್ಯರ ನಿಯೋಗವು ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರಿಗೆ ಮನವಿ ಸಲ್ಲಿಸಿದೆ.

ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಆಗಿರುವ ಸಂದರ್ಭದಲ್ಲಿ ಫಲಾನುಭವಿಗಳು ಹಣ ಪಾವತಿಸಿ ಗ್ಯಾಸ್ ಸಿಲಿಂಡರ್ ಪಡೆಯುವಂತಾಗಿದೆ ಇದರಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರ್ಹ ಫಲಾನುಭವಿಗಳಿಗೆ ಭಾರತ್ ಗ್ಯಾಸ್ ಕಂಪನಿಯ ಸಿಲಿಂಡರನ್ನು ಈ ಮೊದಲಿನಂತೆ ಉಚಿತವಾಗಿ ನೀಡಬೇಕು ಎಂದು ವಲಯ ಅರಣ್ಯ ಅಧಿಕಾರಿಯವರಿಗೆ ಮನವಿ ಮಾಡಲಾಯಿತು.

ಈ ಮನವಿಗೆ ಸ್ಪಂದಿಸಿದ ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರು ಗ್ಯಾಸ್ ಕಂಪನಿ ಹಾಗೂ ಇಲಾಖೆಯೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನಿಯೋಗಕ್ಕೆ ನೀಡಿದರು.
ಮನವಿ ಮಾಡಲು ಬಂದ ನಿಯೋಗದಲ್ಲಿ ವೇಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಸತೀಶ್ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯರಾದ ವಿಕ್ಟರ್ ಮಿನೇಜಸ್ ಹಾಗೂ ರೊನಾಲ್ಡ್ ಡಿಸೋಜ ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.