ರೋಟರಿ ಕ್ಲಬ್‍ನಿಂದ ಅರಸಿನಮಕ್ಕಿ, ಶಿಬಾಜೆಯ 20 ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಅರಸಿನಮಕ್ಕಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಣೆಯಿಂದಾಗಿ ಅಗತ್ಯ ಸಾಮಾಗ್ರಿಗಳ ಖರೀದಿಗೆ ತೊಂದರೆಗೊಳಗಾದವರಿಗೆ ಬೆಳ್ತಂಗಡಿಯ ರೋಟರಿ ಕ್ಲಬ್ ವತಿಯಿಂದ ಅರಸಿನಮಕ್ಕಿ, ಶಿಬಾಜೆ ಪರಿಸರದ 20 ಬಡ ಕುಟುಂಬಗಳಿಗೆ ದಾನಿಗಳ ಸಹಕಾರದಿಂದ ಅಗತ್ಯ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಯಿತು.

ತಲಾ ಒಂದು ಸಾವಿರ ರೂಪಾಯಿಯ ಕಿಟ್‍ನ್ನು 20 ಕುಟುಂಬಗಳಿಗೆ ನೀಡಲು ಸಹಕರಿಸಿದ ದಾನಿಗಳಾದ ಬೆಂಗಳೂರಿನ ಅಶೋಕ್ ಗೋಗಟೆ 10 ಕಿಟ್, ತ್ರಿವಿಕ್ರಮ ಹೆಬ್ಬಾರ್ 5 ಕಿಟ್, ರೋ. ಉದಯಶಂಕರ್ 2 ಕಿಟ್, ರೋ. ದಯಾನಂದ ನಾಯಕ್, ರೋ.ಪುರದಂರ ರಾವ್, ರೋ.ಪ್ರಭಾಕರ ಹೆಗ್ಡೆ ತಲಾ ಒಂದು ಕಿಟ್‍ಗಳನ್ನು ನೀಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರೋ.ಬಿ.ಕೆ.ಧನಂಜಯ ರಾವ್, ಅರಸಿನಮಕ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಪುತ್ತೂರು ರೋಟರಿ ಕ್ಲಬ್ ಸದಸ್ಯ ರೋ. ರಾಘವೇಂದ್ರ ನಾಯಕ್, ಬೆಳ್ತಂಗಡಿ ರೋಟರಿ ಕ್ಲಬ್ ನಿಯೋಜಿತ ಕಾರ್ಯದರ್ಶಿ ಶ್ರೀಧರ್ ರಾವ್ ಕೆ.ವಿ., ರೋ.ದಯಾನಂದ ನಾಯಕ್, ರೋ. ಉದಯಶಂಕರ್, ಅರಸಿನಮಕ್ಕಿ ಮತ್ತು ಶಿಬಾಜೆ ಗ್ರಾಮ ಪಂಚಾಯತ್ ಸದಸ್ಯರುಗಳು, ಸಾಮಾಜಿಕ ಕಾರ್ಯಕರ್ತರು ಮುಂತಾದವರು ಭಾಗವಹಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.