ದಾನಿಗಳ ಸಹಕಾರದಿಂದ 55 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ತಣ್ಣೀರುಪಂತ: ಇಲ್ಲಿಯ ಗ್ರಾ.ಪಂ ವ್ಯಾಪ್ತಿಯ 55 ಕುಟುಂಬಗಳಿಗೆ ದಾನಿಗಳ ಸಹಕಾರದಲ್ಲಿ ಆಹಾರ ಕಿಟ್ ಗಳನ್ನು ವಿತರಿಸಲಾಯಿತು.

ಅಡಿಕೆ ವ್ಯಪಾರಸ್ಥರಾದ ಹಾಜಿ ಝಕಾರಿಯ ರೂ.21 ಸಾವಿರ, ಇಂಡಿಯನ್ ಅಥ್ ೯ ಮೂವರ್ಸ್ ಮಾಲಕ ಅದ್ದು ಕರಾಯ 250 ಕೆ.ಜಿ ಅಕ್ಕಿ, ಹೈದರ್ ದೋಟಾಜೆ ರೂ.3500, ಸ್ಟೇನಿ ಲೋಬೊ ಅಡಿಲ್ ರೂ.1ಸಾವಿರ, ನೀಡಿ ತನ್ನ ಪರಿಸರದ ಬಡವರು ಹಸಿವಿನಿಂದ ಇರಬಾರದು ಎನ್ನುವ ಉದ್ದೇಶದಿಂದ ತಮ್ಮ ಆದಾಯದ ಮೊತ್ತದಿಂದ ಒಂದಂಶವನ್ನು ನೀಡಿದರು.

ಗ್ರಾ.ಪಂ ಸದಸ್ಯರಾದ ಅಯೂಬ್, ನವೀನ್ ಕುಮಾರ್ ಮೂಲಕ ಆಹಾರ ಕಿಟ್ ನೀಡಲಾಯಿತು. ದಾನಿಗಳ ಸಹಕಾರದಿಂದ ಬಡವರ ಕಣ್ಣೀರು ಒರೆಸುವಲ್ಲಿ ಸಹಕಾರಿಯಾಗಿದೆ ಎಂದು ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.