ತಣ್ಣೀರುಪಂತ 4 ಆಡುಗಳ ಸಾವು ಮತ್ತೊಂದರ ಸ್ಥಿತಿ ಚಿಂತಾಜನಕ, ಚಿರತೆ ದಾಳಿ ಶಂಕೆ

Advt_NewsUnder_1
Advt_NewsUnder_1
Advt_NewsUnder_1

ತಣ್ಣೀರುಪಂತ : ಇಲ್ಲಿಯ ಗಾಣದಕೊಟ್ಟಿಗೆ ನಿವಾಸಿ ಕೃಷಿ,ಕೂಲಿ ಕಾರ್ಮಿಕ ಜಿ.ಹುಸೈನರ್ ಮನೆಯ ಪಕ್ಕದ ಗೂಡಿನೊಳಗಿದ್ದ 4 ದೊಡ್ಡ ಆಡುಗಳು ಸತ್ತು,ಮತ್ತೊಂದು ಗಂಭೀರ ಸ್ವರೂಪದ ಗಾಯಗೊಂಡಿರುವ ಘಟನೆ ಎ.19 ರಂದು ನಡೆದಿದೆ.

ಮನೆ ಮಾಲೀಕ ಎಂದಿನಂತೆ ಬೆಳಿಗ್ಗೆ ತನ್ನ ಆಡುಗಳಿಗೆ ಆಹಾರವನ್ನು ನೀಡಲು ಗೂಡಿನ ಬಳಿ ಬಂದಾಗ ವಿಷಯ ತಿಳಿಯಿತು. ಎ.18 ರಂದು ರಾತ್ರಿ ಮನೆಯಲ್ಲಿ ಯಾರು ವಾಸವಿರಲಿಲ್ಲ.ಅದುದರಿಂದ ರಾತ್ರಿ ವೇಳೆಯಲ್ಲಿ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಬಗ್ಗೆ ಸಂಶಯವಿದೆ ಎಂದು ಜಿ.ಹುಸೈನರ್ ತಿಳಿಸಿದರು.ಉತ್ತಮ ತಳೀಯ ಮಲಬಾರ್ ಜಾತಿಯ ಆಡುಗಳಾಗಿದ್ದು ಅಂದಾಜು 70 ಸಾವಿರದಷ್ಟು ನಷ್ಟವಾಗಿ ಎಂದು ಹೇಳಿದರು.

ತಣ್ಣೀರುಪಂತ ಪಂಚಾಯತು ವ್ಯಾಪ್ತಿಯ ಬಿಳಾಲು ಪಾದೆ ಅಕ್ಕಪಕ್ಕದಲ್ಲಿ ಈ ಮೊದಲು ಚಿರತೆ ಸ್ಥಳೀಯರಿಗೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಅರಣ್ಯ ಇಲಾಖೆ ಮತ್ತು ಪಶುವೈದ್ಯಾಧಿಕಾರಗಳಿಗೆ ಮಾಹಿತಿ ನೀಡಿದರು.ಮಡಂತ್ಯಾರು ಹಿರಿಯ ಪಶು ವೈದ್ಯಾಧಿಕಾರಿ ಡಾ| ವಿನಯ ಕುಮಾರ್ ಎಸ್.ಎಮ್. ಸ್ಥಳಕ್ಕೆ ಭೇಟಿ ನೀಡಿ  ಮರಣೋತ್ತರ ಪರೀಕ್ಷೆ ಮಾಡಿದರು. ಹಾಗೂ ಚಿರತೆ ದಾಳಿಯ ಬಗ್ಗೆ ಸಂಶಯ ವ್ಯಕ್ತ ಪಡಿಸಿದರು.

ತೀವೃ ಗಾಯಗೊಂಡ 1 ಆಡಿಗೆ ಚಿಕಿತ್ಸೆ ನೀಡಿದರು.ಈ ಸಂದರ್ಭದಲ್ಲಿ ಕಣಿಯೂರು/ತಣ್ಣೀರುಪಂತ ಉಪ ವಲಯ ಅರಣ್ಯ ಅಧಿಕಾರಿ ಭರತ್ ಪೂಜಾರಿ,ಅರಣ್ಯ ರಕ್ಷಕ ಮಾರುತಿ, ತಣ್ಣೀರುಪಂತ ಪಂಚಾಯತು ಅಧ್ಯಕ್ಷ ಜಯ ವಿಕ್ರಮ್,ಸದಸ್ಯ ಸದಾನಂದ ಶೆಟ್ಟಿ ಮಡಪ್ಪಾಡಿ, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ.ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.ಸರಕಾರದಿಂದ ಪರಿಹಾರವನ್ನು ನೀಡುವಂತೆ ಅರಣ್ಯ ಇಲಾಖೆಗೆ ವಾರಸ್ತುದಾರರು ಮನವಿಯನ್ನು ಸಲ್ಲಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.