ಬಂಟರ ಸಂಘದಿಂದ 600 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ವತಿಯಿಂದ ಗುರುವಾಯನಕೆರೆ ನವಶಕ್ತಿ ಶಶಿಧರ ಶೆಟ್ಟಿ ಉದ್ಯಮಿ ಬರೋಡ ಇವರ ಮುಖ್ಯ ಪ್ರಯೋಜಕತ್ವದಲ್ಲಿ ಅರ್ಹ ಬಡ ಬಂಟ ಕುಟುಂಬದ 600 ಮಂದಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮವು ಎ.19 ರಂದು ಬಂಟರ ಭವನದಲ್ಲಿ ಜರುಗಿತು.

ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಸಾಂಕೇತಿಕವಾಗಿ ಕಿಟ್ ವಿತರಿಸಿ ಶುಭ ಕೋರಿದರು. ಕಾಯ೯ಕ್ರಮದಲ್ಲಿ ಬಂಟರ ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಪಡಗಂಡಿ, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ, ನಿರ್ದೇಶಕರುಗಳಾದ ಪುಷ್ಪರಾಜ ಶೆಟ್ಟಿ, ಉಮೇಶ್ ಶೆಟ್ಟಿ, ವಸಂತ ಶೆಟ್ಟಿ, ಕೃಷ್ಣ ರೈ, ರವಿ ಶೆಟ್ಟಿ ಸುಲ್ಕೇರಿ, ದಯಾನಂದ ಶೆಟ್ಟಿ ಬಳೆಂಜ, ಯುವ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಲಾಯಿಲ, ಆನಂದ ಶೆಟ್ಟಿ ಐಸಿರಿ, ಮೀನಾಕ್ಷಿ ಪಡಂಗಡಿ, ಕಿರಣ್ ಶೆಟ್ಟಿ, ಅಜಿತ್ ಕುಮಾರ್ ಕೊರ್ಯಾರು, ವೆಂಕಟ್ರಮಣ ಶೆಟ್ಟಿ, ಚಂದ್ರಮೋಹನ್ ರೈ ಮೊದಲಾದವರು ಉಪಸ್ಥಿತರು.

About The Author

Related posts

Copy Protected by Chetan's WP-Copyprotect.