ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಸುರೇಂದ್ರನಾಥ ಆಳ್ವ ಕಣಿಯೂರು ಹೃದಯಾಘಾತದಿಂದ ನಿಧನ

ಕಣಿಯೂರು: ವಿಜಯ ಬ್ಯಾಂಕ್ ನಲ್ಲಿ ದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿ ಬೆಂಗಳೂರು ಮೂಡಲುಪಾಲ್ಯ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ನಿವೃತರಾಗಿದ್ದ ಕಣಿಯೂರು ಗ್ರಾಮದ ಅಜ್ಜೊಟ್ಟು ಶಿಲ್ಪವನ ಫಾರ್ಮ್ಸ್ ನಿವಾಸಿ ಸುರೇಂದ್ರನಾಥ ಆಳ್ವ(69ವ.) ಅವರು ಹೃದಯಾಘಾತದಿಂದ ಇಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೃಷಿಕ‌ ಕುಟುಂಬದವರಾಗಿದ್ದ ಅವರು ನಿವೃತಿಯ ಬಳಿಕ ಕೃಷಿ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.
ಮುತ್ತಪ್ಪ ರೈ ನೇತ್ರತ್ವದ ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿಯೂ ಸೇವೆಯಲ್ಲಿದ್ದರು.

ಮೂಲತಃ ಪುತ್ತೂರು ತಾಲೂಕು ಎಲ್ನಾಡು ಗುತ್ತು ನವರಾದ ಅವರು ತಾಲೂಕಿನ‌ ಪ್ರತಿಷ್ಠಿತ ಮುಗೆರೋಡಿ ಕುಟುಂಬಸ್ತರಾಗಿದ್ದಾರೆ.

ಎರಡು‌ ದಿನಗಳ ಹಿಂದೆ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ‌ ಅವರಿಗೆ ಮತ್ತೆ ತೀವ್ರ ಹೃದಯಾಘಾತವಾದ ಪರಿಣಾಮ ಅವರು ಇಂದು ಎ.17  ರಂದು ಕೊನೆಯುಸಿರೆಳೆದರು. ಮೃತರು ಪತ್ನಿ ನಿರೂಪಾ ಎಸ್ ಆಳ್ವಾ ,‌‌ ಪುತ್ರಿ ಶಿಲ್ಪಾ ಆಳ್ವಾ ಹಾಗೂ‌ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.