ಲೃಾಲ ಸಿಡಿಲು ಬಡಿದು ವಿಪರೀತ ಹಾನಿ

ಲೃಾಲ ಗ್ರಾಮದ ಪುತ್ರಬೈಲು ಎಂಬಲ್ಲಿ ಶಾಂಭವಿ ಹೆಗ್ಡೆ ಎಂಬುವರ ಮನೆಯ ತೆಂಗಿನ ಮರಕ್ಕೆ ನಿನ್ನೆ ರಾತ್ರಿ 7.45 ಕ್ಕೆ ಸಿಡಿಲು ಅಪ್ಪಳಿಸಿ ಭಾಗಶಃ ಸುಟ್ಟು ಹೋಗಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ವಿದ್ಯುತ್ ಉಪಕರಣಗಳಿಗೆ ಮನೆಯ ಇನ್ನಿತರ ವಸ್ತುಗಳಿಗೆ ವಿಪರೀತ ಹಾನಿಯಾಗಿರುತ್ತದೆ.

ವಿಷಯ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಮರದ ಬೆಂಕಿಯನ್ನು ನಂದಿಸಿ ಪಕ್ಕದ ಮನೆಗಳಿಗೆ ಏನು ಹಾನಿಯಾಗದಂತೆ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ರೇಷ್ಮಾ ಗಂಜಿಗಟ್ಟಿ, ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಶೆಟ್ಟಿ ಹಾಗೂ ಗ್ರಾಮ ಸಹಾಯಕ ಸತೀಶ್ ಲೃಾಲ ಭೇಟಿ ನೀಡಿ ಪ್ರಕೃತಿ ವಿಕೋಪ ದಡಿಯಲ್ಲಿ ಸೂಕ್ತ ಪರಿಹಾರವನ್ನು ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಾಗರಾಜ್ ಎಸ್ ಲೃಾಲ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾ ಬೆಳ್ತಂಗಡಿ, ರಮೇಶ್ ಟೀಚರ್ ಪುತ್ರಬೈಲು, ದಲಿತ ಮುಖಂಡ ಸುರೇಶ್ ವಿ ಎಸ್ ಪುತ್ರಬೈಲು, ಎಚ್ ಬಿ ಸೀತಾರಾಮ ಪುತ್ರಬೈಲು, ಸಂತೋಷ್ ಲೃಾಲ, ರಾಜು ಗ್ರಾಮ ಪಂಚಾಯತ್ ಸಿಬ್ಬಂದಿ ಲೃಾಲ ಹಾಗು ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.