ಬಡ ಕುಟುಂಬಗಳಿಗೆ 2 ತಿಂಗಳ ದಿನಸಿ ಸಾಮಾಗ್ರಿ ಉಚಿತವಾಗಿ ನೀಡಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ರಿಂದ ಸಿಎಂ ಬಿಎಸ್‍ವೈಗೆ ಮನವಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಬಡವರು ಅಗತ್ಯ ಸಾಮಾಗ್ರಿಗಳ ಖರೀದಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು, ಕನಿಷ್ಟ 2 ತಿಂಗಳ ದಿನಸಿ ಸಾಮಾಗ್ರಿಗಳನ್ನು ಬಡ ಕುಟುಂಬಗಳಿಗೆ ಉಚಿತವಾಗಿ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. 

ಬಿಪಿಎಲ್ ಕಾರ್ಡಿಗೆ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ತಲಾ 10 ಕೆ.ಜಿಯಂತೆ ವಿತರಿಸಿದ್ದು 4 ಕೆಜಿ ಕಡಿತಗೊಳಿಸಲಾಗಿದೆ. ಅದನ್ನು ಸರಿದೂಗಿಸಲು ಮೇ ತಿಂಗಳಲ್ಲಿ 4 ಕೆಜಿ ಕುಚ್ಚಲಕ್ಕಿ ಹಾಗೂ ವಿತರಿಸಲು ಬಾಕಿ ಇರುವ ಗೋಧಿಯನ್ನು ನೀಡಬೇಕು. ಮೇ ತಿಂಗಳಲ್ಲಿ ಪ್ರತಿ ಎಪಿಎಲ್ ಕಾರ್ಡ್‍ಗೆ 15 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ಮತ್ತು ಬೇಳೆ ಉಚಿತವಾಗಿ ನೀಡಬೇಕು. ಪ್ರತಿ ಬಿಪಿಎಲ್ ಕಾರ್ಡ್‍ನವರಿಗೆ 1 ಸಿಲಿಂಡರ್ ಉಚಿತವಾಗಿ ನೀಡುವಂತೆ ಮನವಿ ಮಾಡಿದ್ದಾರೆ.

ಜನರಿಗೆ 3 ತಿಂಗಳ ಇಎಂಐ ಪಾವತಿಸಲು ಸರಕಾರವು ಸಮಯಾವಕಾಶ ನೀಡಿದ್ದು, ಅದರ ಬಡ್ಡಿ ಮನ್ನಾ ಮಾಡಬೇಕು. ಖಾಸಗಿ ಇಎಂಐ ಪಾವತಿಯನ್ನು ಮುಂದೂಡಿ ಅದರ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಬೀಡಿ ಕಾರ್ಮಿಕರನ್ನು ಗುರುತಿಸಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.