ಬಳಂಜ ಗ್ರಾಮದ ಹೆರಾಲ್ಡ್ ಸಲ್ಡಾನ ಆತ್ಮಹತ್ಯೆ

ಬೆಳ್ತಂಗಡಿ: ತಾಲೂಕಿನ ಬಳಂಜ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಎ.17ರಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೇಣೂರು ಠಾಣಾ ವ್ಯಾಪ್ತಿಯ ಬಳಂಜ ಗ್ರಾಮದಲ್ಲಿ ನಡೆದಿದೆ.

ಬಳಂಜ ಗ್ರಾಮದ ಅಂಬ್ರಾಡಿ ಮನೆಯ ಹೆರಾಲ್ಡ್ ಸಲ್ಡಾನ (53) ಅವರ ಮನೆ ಸಮೀಪದ ಗುಡ್ಡೆಯಲ್ಲಿನ ವಿದ್ಯುತ್ ಗೋಪುರದಲ್ಲಿ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಫಿಲೋಮಿನಾ ಸಲ್ಡಾನ, ಇಬ್ಬರು ಪುತ್ರರಾದ ರಯಾನ್ ಪ್ರೀತಂ ಸಲ್ಡಾನ, ರೋಹನ್ ಪ್ರಿನ್ಸ್ ಸಲ್ಡಾನ, ಪುತ್ರಿ ರೆನಿಟಾ ಪ್ರಿಯಾ ಸಲ್ಡಾನ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.