ಮದ್ದಡ್ಕ ವಿಶ್ವ ಹಿಂದೂ ಪರಿಷತ್ ಭಜರಂಗದಳದಿಂದ 30 ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ

ಮದ್ದಡ್ಕ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿ ಖರೀದಿಸಲು ಸಂಕಷ್ಟಕ್ಕೆ ಒಳಗಾದ 30 ಬಡ ಕುಟುಂಬಗಳಿಗೆ ಮದ್ದಡ್ಕ ಘಟಕದ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಅಕ್ಕಿ ವಿತರಿಸಲಾಯಿತು.

ಮದ್ದಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಗೌರವಾಧ್ಯಕ್ಷ ಶೇಖರ್ ಶೆಟ್ಟಿ ಉಪ್ಪಡ್ಕ ಅವರು ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಭಜರಂಗದಳ ಸಂಚಾಲಕ ಯಶೋಧರ ಶೆಟ್ಟಿ ಅರ್ಕಜೆ, ವಿಶ್ವ ಹಿಂದೂ ಪರಿಷತ್ ಮದ್ದಡ್ಕ ಶಾಖೆಯ ಕಾರ್ಯದರ್ಶಿ ವಿನೋದ್ ಶೆಣೈ ಮದ್ದಡ್ಕ, ರುದ್ರೇಶ್ ಕುಮಾರ್, ಮನೋಹರ್ ಕೆದಲಿಕೆ, ಹರೀಶ್ ಬಪ್ಪಳಿಕೆ, ದೀಕ್ಷಿತ್ ಬಲ್ಪುಂಜ, ರಾಘವೇಂದ್ರ ಶೆಟ್ಟಿ, ರಂಜಿತ್ ಶೆಟ್ಟಿ, ವೆಂಕಟೇಶ್ ಕಿನ್ನಿಗೋಳಿ, ಶಶಿಧರ್ ಕಿನ್ನಿಗೋಳಿ, ಹರೀಶ್ ಕೋಟ್ಯಾನ್ ಮದ್ದಡ್ಕ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.