ಎರಡನೇ ಹಂತದ ವಿನಾಯಿತಿ ಘೋಷಿಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

Advt_NewsUnder_1
Advt_NewsUnder_1
Advt_NewsUnder_1
  • ರಿವರ್ಸ್ ರಿಪೋ ದರ ಹಾಗೂ ಸಣ್ಣ, ಮಧ್ಯಮ ಕೈಗಾರಿಕೆಗಳ ನೆರವು ನೀಡಿದ ಆರ್ ಬಿಐ

ನವದೆಹಲಿ: ಕೊರೊನಾದಿಂದಾಗಿ ವಿಶ್ವದ ಉತ್ಪಾದನೆಯ ಜೊತೆಗೆ ಭಾರತದ ಉತ್ಪಾದನಾ ವಲಯ ಸಾಕಷ್ಟು ಕುಸಿತದಿಂದಾಗಿ ಅಭಿವೃದ್ಧಿ ದರವೂ ಕುಸಿದಿದ್ದು ಮುಂದಿನ ದಿನಗಳಲ್ಲಿ ಶೇ. 1.9 ರಷ್ಟು ಅಭಿವೃದ್ಧಿ ದರ ನಿರೀಕ್ಷಿಸಲಾಗಿದೆ. ದೇಶದ ಆರ್ಥಿಕತೆಯ ಪುನಶ್ಚೇತನಕ್ಕಾಗಿ ಆರ್ ಬಿಐ ಹತ್ತಾರು ಘೋಷಣೆಗಳನ್ನು ಮಾಡಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಆರ್‍ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಕುರಿತು ಎ.17ರಂದು ಪತ್ರಿಕಾಗೋಷ್ಠಿ ನಡೆಸಿ “1930ರ ನಂತರ ಇಡೀ ವಿಶ್ವ ಇಂತಹ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ವಿಶ್ವದ 9 ಟ್ರಿಲಿಯನ್ ಅಮೆರಿಕನ್ ಡಾಲರ್‍ನಷ್ಟು ಆರ್ಥಿಕತೆ ನಷ್ಟವಾಗಿದೆ. ಭಾರತದ ಜಿಡಿಪಿ ಸಹ ಶೇ.1.9 ಕ್ಕೆ ಕುಸಿದಿದೆ. ಹೀಗಾಗಿ ದೇಶದ ಆರ್ಥಿಕತೆಯನ್ನು ಮತ್ತೆ ಅಭಿವೃದ್ಧಿಯ ಪಥಕ್ಕೆ ತರಲು ಆರ್‍ಬಿಐ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. 2021-22ರ ಅವಧಿಯಲ್ಲಿ ದೇಶದ ಆರ್ಥಿಕತೆ ಶೇ7.4ಕ್ಕೆ ಏರುವ ನಿರೀಕ್ಷೆ ಇದೆ” ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ, “ಭಾರತದ ಉತ್ಪಾದನಾ ವಲಯದ ಜೊತೆಗೆ ಉದ್ಯೋಗ ವಲಯವೂ ಸಾಕಷ್ಟು ನಷ್ಟ ಅನುಭವಿಸಿದೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಭಾರತದಲ್ಲಿ ಶೇ.21.3 ರಷ್ಟು ಅಧಿಕ ಟ್ಯ್ರಾಕ್ಟರ್ ಮಾರಾಟವಾಗಿದೆ. ಅಲ್ಲದೆ, ಆರ್‍ಬಿಐ ರಿವರ್ಸ್ ರಿಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಲಾಗಿದ್ದು, ಶೇ.4 ರಿಂದ ಶೇ 3.75ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಇನ್ನೂ ಬ್ಯಾಂಕ್‍ಗಳಿಗೆ ಹಾಗೂ ಎಟಿಎಂಗಳಿಗೆ ಜಿಡಿಪಿ ದರದ ಶೇ.3.2 ರಷ್ಟು ಹಣದ ಹರಿವು ನಿರ್ವಹಣೆ ಮಾಡಲಾಗುತ್ತಿದ್ದು, ಎಲ್ಲೂ ಹಣದ ಕೊರತೆ ಉಂಟಾಗಿಲ್ಲ. ಭಾರತದಲ್ಲಿ ಅಗತ್ಯ ಪ್ರಮಾಣದ ದಿನಸಿ ಸಾಮಾಗ್ರಿ ದಾಸ್ತಾನು ಇದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಪುನಶ್ಚೇತನಕ್ಕಾಗಿ ಆರ್‍ಬಿಐ ಪ್ರಮುಖ ಘೋಷಣೆಗಳು:
1. ಬ್ಯಾಂಕುಗಳಿಗೆ ಹಣದ ಕೊರತೆಯಾಗದಂತೆ ಎಚ್ಚರಿಕೆ ಹಾಗೂ ಎಲ್ಲಾ ಬ್ಯಾಂಕುಗಳಿಗೆ ಜಿಡಿಪಿ ಶೇ.3.2 ರಷ್ಟು ಹಣದ ಪೂರೈಕೆ.
2. ಶೇ.91 ರಷ್ಟು ಎಟಿಎಂಗಳ ಕಾರ್ಯ ನಿರ್ವಹಣೆ.
3. ಕೊರೊನಾ ವಿರುದ್ಧದ ಹೋರಾಟಕ್ಕೆ ರಾಜ್ಯಗಳಿಗೆ ಶೇ.60 ಹೆಚ್ಚುವರಿ ಹಣ
4. ಆಹಾರಧಾನ್ಯಗಳಿಗೆ ಕೊರತೆ ಇಲ್ಲದಂತೆ ನೋಡಿಕೊಳ್ಳುವುದು.
5. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ರೂ.50,000 ಕೋಟಿ ಮೀಸಲು
6. ನಬಾರ್ಡ್‍ಗೆ ರೂ.25 ಸಾವಿರ ಕೋಟಿ, ಎನ್‍ಎಚ್‍ಬಿಗೆ ರೂ. 10 ಸಾವಿರ ಕೋಟಿ ಮೀಸಲು
7. ಸಣ್ಣ ಕೈಗಾರಿಕೆ ಅಭಿವರದ್ಧಿ ನಿಗಮಕ್ಕೆ ಹೆಚ್ಚುವರಿ 15,000 ಕೋಟಿ.
8. ರಿವರ್ಸ್ ರಿಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಿದ್ದು ಈ ಮೂಲಕ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ.
9. ಆರ್‍ಬಿಐ ಬಳಿ ಸಾಕಷ್ಟು ವಿದೇಶಿ ಕರೆನ್ಸಿ ಇದೆ.
10. ಮೂರು ತಿಂಗಳ ಕಾಲ ಪಿಎನ್‍ಎ ನಿಯಮ (ಪಡೆದಿರುವ ಸಾಲ ಮರುಪಾವತಿ) ಅನ್ವಯಿಸುವುದಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.