ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಜೇಸಿಯಿಂದ ಆಶಾಕಾರ್ಯಕರ್ತರಿಗೆ ಅಗತ್ಯ ಕಿಟ್‍ಗಳ ವಿತರಣೆ

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವ ಸಲುವಾಗಿ ಪ್ರತಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ವಿಚಾರಿಸುವ ಕೊರೊನಾ ಸೇನಾನಿಗಳಾದ ತಾಲೂಕಿನ ಆಶಾಕಾರ್ಯಕರ್ತೆಯರಿಗೆ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಜೇಸಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅವರು ಸಂಚರಿಸುವ ವಾಹನದ ಭತ್ಯೆಯನ್ನು ನೀಡಿದೆ.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಲಾಮಧು, ಸೀನಿಯರ್ ಜೇಸಿ ಯಶವಂತ್ ಪಟವರ್ಧನ್, ಸೀನಿಯರ್ ಜೇಸಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಪ್ರಮೋದ್ ಆರ್. ನಾಯಕ್, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.