ರಂಝಾನ್ ಆಚರಣೆ ವೇಳೆ ಮಸ್ಜಿದ್‌ಗಳಲ್ಲಿ ಪಾಲಿಸಬೇಕಾದ 6 ಸೂತ್ರಗಳ ಬಗ್ಗೆ ರಾಜ್ಯ ವಕ್ಫ್ ಬೋರ್ಡ್ ನಿರ್ದೇಶನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಂಝಾನ್ ತಿಂಗಳ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ, ರಾಜ್ಯ ಅಲ್ಪಸಂಖ್ಯಾತ ಮತ್ತು ವಕ್ಫ್ ಮಂಡಳಿ ಹೊಸ 6 ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಮಾರ್ಗಸೂಚಿಗಳನ್ನು ರಂಝಾನ್ ಮಾಸ ಆರಂಭವಾದ ಏಪ್ರಿಲ್ 24ರಿಂದ ಲಾಕ್‌ಡೌನ್ ತೀರ್ಮಾನವಾಗಿರುವ ಮೇ. 3 ರ ವರೆಗೆ ಎಲ್ಲಾ ಮುಸ್ಲೀಂ ಬಾಂಧವರು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

ರಾಜ್ಯ ಅಲ್ಪ ಸಂಖ್ಯಾತ ಮತ್ತು ವಕ್ಫ್ ಮಂಡಳಿಯ ಅಧ್ಯಕ್ಷ, ಮುಹಮ್ಮದ್ ಯೂಸುಫ್, ಈ 6 ಮಾರ್ಗಸೂಚಿಗಳ ಅನುಸಾರವೇ ಈ ಬಾರಿಯ ಕೊರೊನಾ ಸೋಂಕಿನ ಭೀತಿಯ ಸಂದರ್ಭದಲ್ಲಿ ರಂಝಾನ್ ಆಚರಿಸುವಂತೆ ಮುಸ್ಲೀಂ ಬಾಂಧವರಿಗೆ ಮನವಿ ಮಾಡಿದ್ದಾರೆ.

ಆರು ಸೂತ್ರಗಳು ಏನೇನು?

ರಂಜಾನ್ ಮಾಸಾಚರಣೆ ವೇಳೆಯಲ್ಲಿ ಮಸೀದಿ ಮತ್ತು ದರ್ಗಾಗಳಲ್ಲಿ ಸಾರ್ವಜನಿಕರು ಒಟ್ಟು ಸೇರಿ ಸಾಮೂಹಿಕ ಪ್ರಾರ್ಥನೆ, ಜುಮಾ ನಮಾಝ್, ತರಾವೀಹ್ ನಮಾಝ್ ಮಾಡುವಂತಿಲ್ಲ.

ನಮಾಝ್ ಕಾರ್ಯದ ವೇಳೆ ದ್ವನಿ ವರ್ಧಕ ಬಳಸಿ ಕೈಗೊಳ್ಳುವಂತಿಲ್ಲ.

ಧ್ವನಿ ವರ್ಧಕಗಳ ಮೂಲಕ ಮೆಲು ಧ್ವನಿಯಲ್ಲಿ ಅಝಾನ್ ಕೂಗಬೇಕು. ಉಪವಾಸ ವ್ರತ ಅಂತ್ಯ ಕುರಿತಂತೆ ಧ್ವನಿ ವರ್ಧಕದ ಮೂಲಕ ಜೋರಾದ ಶಬ್ಧದೊಂದಿಗೆ ಮಾಹಿತಿ ನೀಡುವಂತಿಲ್ಲ. ಧ್ವನಿ ವರ್ಧಕ ಬಳಸಿ, ಪ್ರವಚನ ನೀಡುವಂತಿಲ್ಲ.

ಇಫ್ತಾರ್ ಕೂಟಗಳು ಮತ್ತು ಸಾಮೂಹಿಕ ಭೋಜನ ಕೂಟ ಆಯೋಜಿಸುವಂತಿಲ್ಲ.

ಮಸೀದಿ ಮತ್ತು ಮೊಹಲ್ಲಾಗಳಲ್ಲಿ ತಂಪು ಪಾನೀಯ, ಗಂಜಿ ವಿತರಿಸುವಂತಿಲ್ಲ.

ಮಸೀದಿ ಮತ್ತು ದರ್ಗಾಗಳ ಸುತ್ತಮುತ್ತ ಯಾವುದೇ ಉಪಹಾರ ಅಂಗಡಿಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ.

ಇನ್ನೂ ಅದಲ್ಲದೇ ಈ ಹಿಂದೆಯೇ ತಿಳಿಸಿದಂತೆ ರಂಝಾನ್ ಅಥವಾ ನಮಾಝ್ ಹೆಸರಿನಲ್ಲಿ ಗುಂಪು ಬೇಡ. ಇಫ್ತಾರ್ ಕೂಟ ನಡೆಸಬೇಡಿ. ೪-೫ ಜನ ಅಂತರದಿಂದ ನಮಾಝ್ ಮಾಡಿ. ಹೊರಗೆ ಓಡಾಡುವಾಗ ಮಾಸ್ಕ್ ಧರಿಸಿ. ಬಡವರಿಗೆ ಸಹಾಯ ಹೆಸರಲ್ಲಿ ಗುಂಪು ಬೇಡ. ಮುಸ್ಲಿಮರ ಜೊತೆಗೆ ಇತರರಿಗೂ ಸಹಾಯ ಮಾಡಿ. ನಿಮ್ಮ ಮನೆಯಲ್ಲೇ ರಂಝಾನ್ ಆಚರಿಸಿ.
ದರ್ಗಾ ಮತ್ತು ಮಸೀದಿಗೆ ಹೋಗಬೇಡಿ. ಕೇಂದ್ರ, ರಾಜ್ಯ ಸರ್ಕಾರದ ಸೂಚನೆ ಪಾಲಿಸಿ. ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸಿ ಎಂದು ತಿಳಿಸಲಾಗಿದೆ.

ಈ ಮಾರ್ಗಸೂಚಿಗಳು ಮೇ.3 ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂಬುದಾಗಿಯೂ ರಾಜ್ಯ ವಕ್ಫ್ ಬೋರ್ಡ್ ನ ಅಧಕ್ಷರಾದ ಮೊಹಮ್ಮದ್ ಯೂಸುಫ್ ಮುಸ್ಲೀಂ ಬಾಂಧವರಿಗೆ ಮನವಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.