ಶಾಸಕರ ನೇತ್ರತ್ವದಲ್ಲಿ ನೀಡಲು ಉದ್ದೇಶಿಸಿದ ಆಹಾರದ ಕಿಟ್ಟ್ ತಯಾರಿಗೆ ಉಜಿರೆಯಲ್ಲಿ ಚಾಲನೆ

ಉಜಿರೆ: ಕೋರೋನದಿಂದಾಗಿ ಬದುಕು ಸಾಗಿಸಲು ಕಷ್ಟಸಾಧ್ಯ ಎನ್ನುವ ಕುಟುಂಬಗಳಿಗೆ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ನೀಡುವ ಬಗ್ಗೆ ತಯಾರಿ ನಡೆಯುತ್ತಿದ್ದು ಇಂದು ಕಿಟ್ ಗಳ ತಯಾರಿಗೆ ದೇವಳದ‌ ಮೊಕ್ತೇಸರ ಶರತ್ ಕೃಷ್ಣ ಪಡ್ವೇಟ್ನಾಯ ಚಾಲನೆ ನೀಡಿದರು.

ಶಾಸಕ‌ ಹರೀಶ್ ಪೂಂಜ ಕಿಟ್ಟ್ ಗಳ ತಯಾರಿಗೆ ಚಾಲನೆ ನೀಡಿದರು.

ಉಜಿರೆ ಶ್ರೀ ಜನಾರ್ದನ ದೇವಾಲಯದ ಸಭಾಂಗಣದಲ್ಲಿ ಈ‌ಕಾರ್ಯಾಚರಣೆ ಆರಂಭಗೊಂಡಿತು

ಈ ಸಂದರ್ಭದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್, ಲಕ್ಷ್ಮಿ ಗ್ರೂಪ್ಸ್ , ರಾಜೇಶ್ ಪೈ, ಸಂಧ್ಯಾ ಟ್ರೇಡರ್ಸ್, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ, BJP ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೈಕುರೆ ಹಾಗೂ‌ ಶ್ರೀನಿವಾಸ ರಾವ್ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು.

ಬದುಕು ಕಟ್ಟೋಣ ಬನ್ನಿ ತಂಡದ ಕಾರ್ಯಕರ್ತರು ಸುಮಾರು ಮೂವತ್ತು ಸಾವಿರ ಕಿಟ್ ಗಳ ತಯಾರಿಯಲ್ಲಿ ನಿರತರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.