ಬಳಂಜ ಗ್ರಾಮ ಪಂಚಾಯತ್ ನಲ್ಲಿ ಟಾಸ್ಕ್ ಫೋರ್ಸ್ ಸಭೆ

ಬಳಂಜ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆಯು ಎ 16ರಂದು ಬಳಂಜ ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆಯಿತು.

ಇಗಾಗಲೇ ಕೊರೊನಾ ವೈರಸ್ ಸಮಸ್ಯೆಯಿಂದ ಮೇ 3ರ ತನಕ ಲಾಕ್ ಡೌನ್ ಇರುವುದರಿಂದ ಎಲ್ಲರೂ ಸರಕಾರದ ಆದೇಶವನ್ನು ಪಾಲಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು,ಹಾಗೆಯೇ ಈ ಭಾಗದಲ್ಲಿ ಕಾರ್ಯಪಡೆಯು ಗ್ರಾಮದ ಅಗತ್ಯತೆಯನ್ನು ಪೂರೈಸಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸಿದೆ ಹಾಗೂ ಊರಿನ ಸಂಘ ಸಂಸ್ಥೆಗಳು ಕೂಡ ಅಶಕ್ತರನ್ನು ಗುರುತಿಸಿ ಆಹಾರ ಕಿಟ್ ನೀಡುತ್ತೀರುವುದು ಶ್ಲಾಘನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.


ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಣಾಧಿಕಾರಿ ಜಯರಾಮ್, ತಾ.ಪಂ ಸದಸ್ಯ ಸುಧೀರ್ ಆರ್ ಸುವರ್ಣ,ಬಳಂಜ ಗ್ರಾ.ಪಂ ಅಧ್ಯಕ್ಷೆ ದೇವಕಿ, ಪಿಡಿಓ ಸುಧಾಮಣಿ, ಅಳದಂಗಡಿ ವೈದ್ಯಾಧಿಕಾರಿ ಚೈತ್ರ, ಕಾರ್ಯದರ್ಶಿ ಪ್ರೀಯಾ ಹೆಗ್ಡೆ,ಗ್ರಾಮ ಕರಣೀಕ ಸಂತೋಷ್ , ಆರೋಗ್ಯ ಇಲಾಖೆಯ ಮೋಹಿನಿ,ಮಮತಾ,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂ.ಸದಸ್ಯರು, ಕಾರ್ಯಪಡೆ ಸದಸ್ಯರು, ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು..

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.