ಸಿಕ್ಕ ಸಿಕ್ಕಲ್ಲಿ ಉಗುಳಿದರೆ ಕೇಸ್.!

Advt_NewsUnder_1
Advt_NewsUnder_1
Advt_NewsUnder_1

ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮಾಸ್ಕ್ ಇಲ್ಲದೆ ಓಡಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಮದ್ಯ ಕುಡಿದು ಉಗುಳುವುದು, ಗುಟ್ಕಾ ಮತ್ತು ಅದರದ್ದೇ ಇತರ ಉತ್ಪನ್ನಗಳನ್ನು ಬೇಕಾಬಿಟ್ಟಿ ಉಪಯೋಗಿಸಿ ಸಾರ್ವಜನಿಕ ಸ್ಥಳಗಳಲ್ಲಿ ಮನಸೋಇಚ್ಛೆ ಉಗುಳುವುದು, ಮತ್ತು ತಂಬಾಕು ಹಾಗೂ ಅದರ ಇತರ ಉತ್ಪನ್ನಗಳನ್ನು ಉಪಯೋಗಿಸಿ ಬಸ್ಸು ನಿಲ್ದಾಣ ಸೇರಿದಂತೆ ಜನರ ಓಡಾಟ ಹೆಚ್ಚಿರುವ ಪ್ರದೇಶಗಳಲ್ಲಿ ಉಗುಳಿ ವೈರಸ್, ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುವ ವಸ್ತುಗಳನ್ನು ಈ ನಿಯಮಕ್ಕೆ ಪೂರಕವಾಗಿ ಸಧ್ಯ ನಿಷೇಧಿಸಲಾಗಿದೆ.

ಈ ನಿರ್ದೇಶನಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಸ್ಥಿತಿಗತಿಗೆ ಅನ್ವಯವಾಗಿ ಕಠಿಣವಾಗಿ ಜಾರಿಗೊಳಿಸಬಹುದಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಮತ್ತು ಇತರ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನೂ ನೀಡಿದೆ. ಜೊತೆಗೆ ಲಾಡ್‌ಡೌನ್ ಹಿನ್ನೆಲೆಯಲ್ಲಿ ವಿವಾಹದಂತಾ ಶುಭ ಸಮಾರಂಭ, ಅಂತ್ಯ ಸಂಸ್ಕಾರದಂತಹಾ ಸಾರ್ವಜನಿಕರು ಹೆಚ್ಚು ಸೇರುವ ಕಾರ್ಯಕ್ರಮಗಳಿಗೂ ನಿಯಮ ರೂಪಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.