ಡ್ರೀಮ್ ಕ್ಲಬ್ ಅಗರಿ ಇವರಿಂದ ಕಾಡಿನಲ್ಲಿ ಹಕ್ಕಿಗಳಿಗೆ ನೀರುಣಿಸುವ ವಿಭಿನ್ನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಲಾಕ್ ಡೌನ್ ಅವಧಿಯನ್ನು ಯುವಕರು ಲೂಡೊ ಆಡುವ ಮೂಲಕ‌, ಕೇವಲ‌ ಟಿ. ವಿ ವೀಕ್ಷಣೆ ಮೂಲಕ ಮಾತ್ರ ಕಳೆದೋ ಅಥವಾ ಬರೀ ತಿಂದುಂಡು ನಿದ್ದೆ ಮಾಡಿ ಕಳೆಯುವ ಬದಲು ಮುಂಡಾಜೆ ಯ ಡ್ರೀಮ್ ಕ್ಲಬ್ ಅಗರಿ ತಂದ ಕಾಡಿನಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ವಿಭಿನ್ನ ಕಾರ್ಯಕ್ರಮದ‌ ಮೂಲಕ ಎಲ್ಲರ‌ ಗಮನ ಸೆಳೆದಿದೆ.

ಮುಂಡಾಜೆ ಸೀಟು ರಕ್ಷಿತಾರಣ್ಯ ಪ್ರದೇಶದೊಳಗೆ ಪ್ರವಾಸಿಗರು ಎಸೆದು ಅರಣ್ಯ ಭಾಗ ಮಲಿನಗೊಳಿಸಿದ‌ ಪ್ರದೇಶದಲ್ಲಿ ಇರುವ ಪ್ಲಾಸ್ಟಿಕ್ ಬಾಟಲಿ ಗಳನ್ನು ಸಂಗ್ರಹಿಸಿ ಅದನ್ನು ಬಾಯಿ ಅಗಲ ಬರುವಂತೆ ಕತ್ತರಿಸಿ ಅವುಗಳನ್ನು ಮರಗಳಿಗೆ ಹಗ್ಗದ ಸಹಾಯದಿಂದ ಕಟ್ಟಿ ಅದಕ್ಕೆ ನೀರು ಸುರಿದಿಟ್ಟಿದ್ದಾರೆ.

ಕಾಡು ಪ್ರಾಣಿಗಳು, ಹಕ್ಕಿಗಳು ಬೇಸಿಗೆಯ ಬಿಸಿಲ ಬೇಗೆಗೆ ನೀರು‌ ಕುಡಿಯಲು ಲಭ್ಯವಾಗುವಂತೆ ಈ ಯುವಕರ ತಂಡ ವನ್ಯಜೀವಿ ಸಂರಕ್ಷಣಾ ಸೇವೆ ಮಾಡಿದೆ.

ತಂಡಕ್ಕೆ ಫಾರೆಸ್ಟರ್ ಶರತ್ ಶೆಟ್ಟಿ ಅವರು ಮಾರ್ಗದರ್ಶನ ಪ್ರೋತ್ಸಾಹ ನೀಡಿದ್ದಾರೆ.
ತಂಡದಲ್ಲಿ ಹರ್ಷಿತ್ , ಭರತ್ , ವಿಜೀತ್ , ಕಾರ್ತಿಕ್ , ಸಂಜಯ್ , ದರ್ಶನ್, ಕಮಲಾಕ್ಷ ಮೊದಲಾದವರು ಕೈ ಜೋಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.