ಕೊರೊನಾ ಸೇನಾನಿಗಳಿಗೆ ಮನೆ ಮನೆಗೆ ತೆರಳಿ ಆರೋಗ್ಯ ವಿಚಾರಿಸಲು ಆಟೋ ರಿಕ್ಷಾ ವ್ಯವಸ್ಥೆ

Advt_NewsUnder_1
Advt_NewsUnder_1
Advt_NewsUnder_1

ಕೊರೊನಾ ಸೇನಾನಿಗಳಿಗೆ ಮನೆ ಮನೆ ಅಳದಂಗಡಿಯ ಆಶಾ ಕಾರ್ಯಕರ್ತೆಯರು, ನರ್ಸ್‍ಗಳಿಗೆ ಆಹಾರ ಕಿಟ್ ವಿತರಣೆ

ಅಳದಂಗಡಿ: ಮಹಾಮಾರಿ ಕೊರೊನಾ ವೈರಸ್ ಹರಡದಂತೆ ತಡೆಯಲು ಹೋರಾಡುತ್ತಿರುವ ಕೊರೊನಾ ಸೇನಾನಿಗಳಾದ ಆಶಾ ಕಾರ್ಯಕರ್ತೆಯರು, ನರ್ಸ್‍ಗಳು ಮನೆ ಮನೆಗೆ ತೆರಳಿ ಆರೋಗ್ಯ ವಿಚಾರಿಸಲು ಜನಸ್ನೇಹಿ ಪೊಲೀಸ್ ವಾಟ್ಸ್ಯಾಪ್ ಗ್ರೂಪ್ ಅರುವ ಹಾಗೂ ಸುಲ್ಕೇರಿಮೊಗ್ರು ವತಿಯಿಂದ ಆಟೋ ರಿಕ್ಷಾದ ವ್ಯವಸ್ಥೆ ಮಾಡಲಾಯಿತು.

ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 11 ಗ್ರಾಮಗಳಿಗೆ ಆಶಾ ಕಾರ್ಯಕರ್ತೆಯರು, ನರ್ಸ್‍ಗಳು ಮನೆ ಮನೆಗೆ ಭೇಟಿ ನೀಡಲು ಸುಲಭಗೊಳಿಸುವ ವ್ಯವಸ್ಥೆಗಾಗಿ ದಾನಿಗಳ ಸಹಕಾರದಿಂದ ಸುಮಾರು ರೂ.60 ಸಾವಿರ ವೆಚ್ಚದಲ್ಲಿ 15 ಆಶಾ ಕಾರ್ಯಕರ್ತೆಯರಿಗೆ 15 ಆಟೋ ರಿಕ್ಷಾಗಳ ವ್ಯವಸ್ಥೆಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಲೋಲಾಕ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಜನಸ್ನೇಹಿ ಪೊಲೀಸ್ ವಾಟ್ಸ್ಯಾಪ್ ಗ್ರೂಪ್‍ನಿಂದ ಪ್ರತಿ ಆಶಾ ಕಾರ್ಯರ್ತೆಯರಿಗೆ ಆಹಾರದ ಕಿಟ್ ನೀಡಲಾಯಿತು.


ಈ ಸಂದರ್ಭದಲ್ಲಿ ಅಳದಂಗಡಿ ವೈದ್ಯಾಧಿಕಾರಿ ಡಾ.ಚೈತ್ರಾ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಮಾರ್, ಬೀಟ್ ಪೊಲೀಸ್ ಪ್ರಶಾಂತ್, ದಂತ ವೈದ್ಯ ಡಾ.ಶಶಿಧರ ಡೋಂಗ್ರೆ, ಉದ್ಯಮಿಗಳಾದ ವಿಶ್ವನಾಥ ಬಂಗೇರ, ಚಂದ್ರಶೇಖರ ಅಳದಂಗಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.