ತರಕಾರಿ, ಹಣ್ಣುಗಳ ಮಾರಾಟ ಮಾಡಲಾಗದೆ ಕಂಗಾಲಾದ ತಾಲೂಕಿನ ಕೃಷಿಕರು

  • ಸ್ವಲ್ಪ ಪ್ರಮಾಣದಲ್ಲಿ ಖರೀದಿಸುವ ಸ್ಥಳೀಯರು, ಸಾಗಾಟ ವ್ಯವಸ್ಥೆ ಇಲ್ಲದೆ ಹಾಳಾದ ತರಕಾರಿ, ಹಣ್ಣು

ಶೈಜು ತೋಟತ್ತಾಡಿ

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿರುವುದರಿಂದ ಬೆಳ್ತಂಗಡಿ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಹಾಗೂ ತರಕಾರಿ ಬೆಳೆ, ಬಾಳೆಗೊನೆಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗದೇ ನಷ್ಟಕ್ಕೆ ಸಿಲುಕಿದ್ದಾರೆ.

ಅನಾನಸು ಬೆಳೆ ಕಟಾವಿಗೆ ಸಿದ್ಧತೆ
ತೋಟತ್ತಾಡಿ ಇಲ್ಲಿಯ ಶೈಜು ಎಂಬುವವರು 80 ಎಕರೆಗಳಲ್ಲಿ ಬೆಳೆದ ಅನಾನಸು (ಪೈನಾಪಲ್) ಹಣ್ಣುಗಳೂ ಕಟಾವಿಗೆ ಬಂದಿದೆ. ಕೋವಿಡ್-19ನಿಂದಾಗಿ ಮಾರುಕಟ್ಟೆ ದೊರೆಯದೆ ಅನಾನಸು ಕೃಷಿಕ ಭಾರೀ ನಷ್ಟಕ್ಕೊಳಗಾಗಿದ್ದಾನೆ. ಮಾರುಕಟ್ಟೆಗಳಿಗೆ ಸಾಗಾಟದ ತೊಂದರೆಯಿಂದಾಗಿ ರೈತ ಕಂಗಾಲಾಗಿದ್ದಾರೆ. ಕಟಾವಿಗೆ ಬಂದಿರುವ ಬೆಳೆ 3 ಲ್ಕಷ ಕೆ.ಜಿ ಇದೆ. ದರ ಕೆ.ಜಿಗೆ 40ರಿಂದ 45 ಆಗಿದೆ. ಹೆಚ್ಚಿನ ಮಾಹಿತಿಗಾಗಿ 8105309421 , 9481762044 ಸಂಪರ್ಕಿಸಬಹುದು.

ತರಕಾರಿಗಳು ಮನೆಯಲ್ಲೇ ಇದೆ
ವೇಣೂರು ಕರೀಮಣೇಲು ಗ್ರಾಮದ ಗಾಂಧಿನಗರದ ನಿವಾಸಿ ಹೆನ್ರಿ ಮೋರಸ್‍ರವರು ತರಕಾರಿ ಬೆಳೆಸಿ ಕೊರೊನಾ ಲಾಕ್‍ಡೌನ್‍ನಿಂದಾಗಿ ಅಲಸಂಡೆ, ಬಸಳೆ, ಹೀರೇಕಾಯಿ ತರಕಾರಿಗಳು ಮಾರಾಟವಾಗದೆ ಮನೆಯಲ್ಲಿಯೇ ಉಳಿಯುತ್ತಿದೆ. ಕೆಲವು ತರಕಾರಿಗಳನ್ನು ಸುತ್ತಮುತ್ತಲಿನ ಮನೆಯ ನಿವಾಸಿಗಳು ಕೆಲವು ತರಕಾರಿಗಳನ್ನು ಖರೀದಿ ಮಾಡುವುದರಿಂದ ಸ್ವಲ್ಪ ಸಮಾಧಾನವಿದೆ ಎನ್ನುತ್ತಾರೆ ಮೋರಸ್. ತರಕಾರಿ ಖರೀದಿ ಮಾಡುವವರು ಈ ಸಂಖ್ಯೆಗೆ 9448039832 ಸಂಪರ್ಕಿಸಬಹುದು.

ಹೆನ್ರಿ ಮೋರಾಸ್

ಒಮ್ಮೆ ಬೇಗ ಮಾರಾಟವಾದರೆ, ಕೆಲವೊಮ್ಮೆ ಉಳಿಯುತ್ತಿದೆ
ಉಜಿರೆಯಲ್ಲಿ ಹಲವು ವರ್ಷದಿಂದ ಮನೆಯಲ್ಲಿಯೇ ತರಕಾರಿ ಬೆಳೆಸಿ ಜೀವನ ಮಾಡುತ್ತಿದ್ದ ವಿನ್ಸೆಂಟ್ ಪಿಂಟೋರವರು ಪ್ರತಿ ದಿನ ಉಜಿರೆ ಪೇಟೆಯ ಬೀದಿ ಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಬಸಳೆ, ಬಾಳೆಕಾಯಿ, ಬದನೆ, ಅಲಸಂಡೆ, ಹೀರೆಕಾಯಿ, ವೀಳ್ಯದೆಲೆ, ತಿಮರೆ ಇತ್ಯಾದಿ ಬೆಳೆಸಿ ತರಕಾರಿ ಮಾಡಲಾಗಿದೆ. ಕೊರೊನಾ ವೈರಸ್‍ನಿಂದಾಗಿ ತರಕಾರಿಗಳು ಕೆಲವೊಮ್ಮೆ ಉಳಿದರೆ, ಕೆಲವೊಂದು ಸಲ ಬೇಗನೆ ಖಾಲಿಯಾಗುತ್ತದೆ ಎಂದು ಹೇಳುತ್ತಾರೆ. ವಿನ್ಸೆಂಟ್‍ರಿಂದ ಹೆಚ್ಚಿನ ಮಾಹಿತಿಗಾಗಿ 9686363623 ಸಂಪರ್ಕಿಸಬಹುದು.

ವಿನ್ಸೆಂಟ್ ಪಿಂಟೋ

ತರಕಾರಿ ಮಾರಾಟವಾಗದೇ ತೊಂದರೆಯಾಗಿದೆ
ಉಜಿರೆಯ ಗುರಿಪಳ್ಳದ ನಿವಾಸಿ ಸುಂದರ ಗೌಡ ಎಂಬುವವರು ತರಕಾರಿ ಬೆಳೆಸಿದ್ದು ಪ್ರತೀ ವಾರ ಬಂದು ಉಜಿರೆಯಲ್ಲಿ ಬಸಳೆ, ಅಲಸಂಡೆ, ಹೀರೆಕಾಯಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಇರುವುದರಿಂದ ಬೆಳೆದ ತರಕಾರಿ ಬಾಕಿಯಾಗುತ್ತಿದೆ. ಈ ತರಕಾರಿಯಿಂದಲೇ ಜೀವನ ನಡೆಸುವ ನಮಗೆ ಬಹಳ ತೊಂದರೆ ಎದುರಾಗಿದೆ. ತರಕಾರಿ ಖರೀದಿ ಸಂಪರ್ಕಕ್ಕೆ: 9480572504

ಸುಂದರ ಗೌಡ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.