ಬಡ ಕುಟುಂಬಗಳಿಗೆ ನೆರವು ನೀಡುತ್ತಿದ್ದ ತಂಡಕ್ಕೆ ಪುಟಾಣಿಗಳಿಂದ ಧನಸಹಾಯ!

‘ಹಸಿವು ಮುಕ್ತ ಗ್ರಾಮಕ್ಕಾಗಿ ‘ ಎಂಬ ವಾಟ್ಸ್ಯಾಪ್ ತಂಡಕ್ಕೆ ರೂ.500 ನೀಡಿದ ನಿಜ ಮತ್ತು ಮೃದುಲಾ

ಶಿರ್ಲಾಲು: ಮಹಾಮಾರಿ ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಆದ್ದರಿಂದ ಅಗತ್ಯ ಸಾಮಾಗ್ರಿ ಖರೀದಿಸಲು ಸಂಕಷ್ಟಕ್ಕೀಡಾದ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಿಸುತ್ತಿದ್ದ ‘ಹಸಿವು ಮುಕ್ತ ಗ್ರಾಮಕ್ಕಾಗಿ’ ಎಂಬ ವಾಟ್ಸ್ಯಾಪ್ ಗ್ರೂಪ್‍ಗೆ ಇಬ್ಬರು ಪುಟಾಣಿಗಳು 500 ರೂ. ಧನ ಸಹಾಯ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಶಿರ್ಲಾಲು ಕರಂಬಾರು ಬೀಟ್ ಪೊಲೀಸರ ನೇತೃತ್ವದಲ್ಲಿ, ಪಂಚಾಯತ್ ನೌಕರರು, ಗ್ರಾಮದ ಸಮಾನ ಮನಸ್ಕ ಯುವಕರ ದಾನಿಗಳ ನೆರವಿನ ಹಸಿವು ಮುಕ್ತ ಗ್ರಾಮಕ್ಕಾಗಿ ಎಂಬ ವಾಟ್ಸ್ಯಾಪ್ ತಂಡದ ಸೇವೆಯಿಂದ ಪ್ರೇರಣೆಗೊಂಡ ಬೇಬಿ ನಿಜ(6ನೇ ತರಗತಿ), ಬೇಬಿ ಮೃದುಲಾ (2ನೇ ತರಗತಿ)ಅಮ್ಮ ನೀಡುತ್ತಿದ್ದ ಪಾಕೆಟ್ ಮನಿಗಳನ್ನು ಒಟ್ಟುಗೂಡಿಸಿದ ರೂ.500ನ್ನು ಅಶಕ್ತ ಕುಟುಂಬಗಳ ಕಷ್ಟಕ್ಕೆ ಮಿಡಿದು ವಾಟ್ಸ್ಯಾಪ್ ತಂಡದ ನೆರವಿನ ಸಹಾಯನಿಧಿಗೆ ಮಾನವೀಯತೆಯಿಂದ ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಶಿರ್ಲಾಲು ಗ್ರಾಮದ ಆರೋಗ್ಯ ಸಹಾಯಕಿಯಾದ ಜಯಲಕ್ಷ್ಮಿ ಅವರ ಮಕ್ಕಳಾದ ಈ ಪುಟಾಣಿಗಳು ಬೆಳ್ತಂಗಡಿ ಚರ್ಚ್ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.