ಬೆಳ್ತಂಗಡಿ ಕ್ಯಾಂಪ್ಕೋದಲ್ಲಿ ದಿನಕ್ಕೆ 20 ಸದಸ್ಯರಿಂದ ಅಡಿಕೆ ಖರೀದಿ

Advt_NewsUnder_1
Advt_NewsUnder_1
Advt_NewsUnder_1

* ಒಬ್ಬ ಸದಸ್ಯರಿಗೆ ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಮಾರಾಟಕ್ಕೆ ಅವಕಾಶ
* ಪ್ರತಿ ಸೋಮವಾರ ಕೊಕ್ಕೋ ಖರೀದಿ

ಬೆಳ್ತಂಗಡಿ : ಕ್ಯಾಂಪ್ಕೋ ಲಿಮಿಟೆಡ್ ಸಂಸ್ಥೆಯು ಎ.14ರಿಂದ ಬೆಳ್ತಂಗಡಿಯ ಎಪಿಎಂಸಿ ಪ್ರಾಂಗಣದಲ್ಲಿ ವಾರದಲ್ಲಿ ಮೂರು ದಿನ (ಮಂಗಳವಾರ, ಬುಧವಾರ, ಶುಕ್ರವಾರ) ಕ್ಯಾಂಪ್ಕೋ ಸದಸ್ಯರಿಂದ ಅಡಿಕೆ ಹಾಗೂ ಪ್ರತಿ ಸೋಮವಾರ ಕೊಕ್ಕೋವನ್ನು ಖರೀದಿಸಲಿದೆ.

ಅಡಿಕೆ ಮಾರಾಟಕ್ಕೆ ಬರುವ ಸದಸ್ಯರು ಆಯಾ ಶಾಖೆಗಳಿಗೆ ಬರುವಾಗ ಕ್ಯಾಂಪ್ಕೋ ಸದಸ್ಯತ್ವದ ಗುರುತಿನ ಚೀಟಿ, ಕ್ಯಾಂಪ್ಕೋ ಕಾರ್ಡು, ಪಹಣಿ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮುಖಗವುಸು (ಮಾಸ್ಕ್ ) ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು. ಅಡಿಕೆ ಮಾರಾಟ ಮಾಡಲು ಕ್ಯಾಂಪ್ಕೋ ಶಾಖೆಯಲ್ಲಿ ಸದಸ್ಯರಾಗಿದ್ದು, ವ್ಯವಹಾರ ನಡೆಸಿದವರಿಗೆ ಮಾತ್ರ ಅವಕಾಶ ಇರಲಿದೆ. ಅಡಿಕೆ ಮಾರಾಟಕ್ಕೆ ಬರುವವರು ಮೊದಲು ದೂರವಾಣಿ ಮೂಲಕ ಕಚೇರಿ ಸಂಪರ್ಕಿಸಿ ಟೋಕನ್ ಪಡೆಯಬೇಕು. ಪ್ರತಿದಿನ 20 ಸದಸ್ಯರಿಗೆ ಮಾತ್ರ ಅವಕಾಶವಿರಲಿದೆ ಎಂದು ಬೆಳ್ತಂಗಡಿ ಎಪಿಎಂಸಿ ಕಾರ್ಯದರ್ಶಿ ತಿಳಿಸಿದ್ದಾರೆ.

ಕ್ಯಾಂಪ್ಕೋ ರೂಪಿಸಿದ ನಿಯಮಗಳೇನು?
1. ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ.25,000 ದ ಅಡಿಕೆ ಮಾರಾಟಕ್ಕೆ ಅವಕಾಶ.
2. ಪ್ರತಿದಿನ 20 ಸದಸ್ಯರಿಗೆ ಮಾತ್ರ ಅವಕಾಶ.
3. ಆಯಾ ಶಾಖಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳಬೇಕು. ದಿನದ ಗರಿಷ್ಠ ಮಿತಿಯ (20 ಸದಸ್ಯರು)ಬಳಿಕ ಮುಂದಿನ ದಿನಕ್ಕೆ ಟೋಕನ್ ಪಡೆಯಬೇಕು.
4. ಖರೀದಿ ಸಮಯ : ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00ರ ವರೆಗೆ ಅಡಿಕೆ ಖರೀದಿ, ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಕೊಕ್ಕೋ ಖರೀದಿ

ಬೆಳ್ತಂಗಡಿ ಶಾಖೆಯ ಖರೀದಿ ವಿವರ:
ಕೊಕ್ಕೊ : ಪ್ರತಿ ಸೋಮವಾರ
ಅಡಿಕೆ : ಮಂಗಳವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಉದಯ ಬಿ.ಆರ್. ಮೊ:. 9880903258.
ಟೋಕನ್ ಪಡೆಯಲು ಕಚೇರಿ ಸಂಖ್ಯೆ : 08256 – 298245.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.