ಬಿಷಪ್ ಹೌಸ್ ಪ್ರಾಯೋಜಿತ ಡಿಕೆಆರ್ ಡಿ ಎಸ್ ಸಂಸ್ಥೆಯಿಂದ 1ಸಾವಿರ ಆಹಾರ ಕಿಟ್ಟ್ ಗಳ ಕೊಡುಗೆಗೆ ಚಾಲನೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ಡಿಕೆಡಿಅರ್ ಎಸ್ ಸಂಸ್ಥೆಯಿಂದ ಅರ್ಹರಿಗೆ ನೀಡಲು ಉದ್ಧೇಶಿಸಿರುವ 1ಸಾವಿರ ಕಿಟ್ಟ್ ಗಳ ಉದ್ಘಾಟನೆ ಇಂದು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಆಶಾಕಾರ್ಯಕರ್ತೆಯರಿಗೆ ವಿತರಿಸಿ ಚಾಲನೆ ನೀಡಲಾಯಿತು.

ತಾಲೂಕಿನ 250 ಆಶಾಕಾರ್ಯಕರ್ತೆಯರಿಗೆ 20 ಕೆ.ಜಿ. ಅಕ್ಕಿ, ದಿನಸಿ ಸಾಮಗ್ರಿ ಸಹಿತ ಮಾಸ್ಕ್, ಫಿನಾಯಿಲ್ ವಿತರಿಸಲಾಯಿತು.

ಈ ವೇಳೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರೊಕ್ರೇಟರ್ ಫಾ.ಅಬ್ರಾಹಂ ಪಟ್ಟೇರಿಲ್, ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಟೋಮಿ ಕಲ್ಲಿಕಾಟ್, ಡಿಕೆಆರ್ ಡಿಎಸ್ ನಿರ್ದೇಶಕ ಫಾ. ಬಿನೋಯ್ ಎ.ಜೆ., ಫ್ಯಾಮಿಲಿ ಅಸೋಶಿಯೇಟ್ ನಿರ್ದೇಶಕ ಫಾ. ಥೋಮಸ್ ಪುದಿಯೆರ, ಕೆ.ಎಸ್.ಎಂ.ಸಿ.ಯೆ ಸಂಘಟಕ ಫಾ.ಬಿನೋಯ್ ಜೋಸೆಫ್ ಇವರುಗಳು ಆಶಾ ಕಾರ್ಯಕರ್ತೆ ಯರಿಗೆ ಕಿಟ್ ಹಸ್ತಾಂತರಿಸಿದರು.

ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ, ಸಮುದಾಯ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ, ಆಶಾ ಕಾರ್ಯಕರ್ತೆ ಯರ ಮೇಲ್ವಿಚಾರಕಿ ಹರಿಣಿ, ಹಿರಿಯ ಪುರುಷ ಆರೋಗ್ಯ ಕಾರ್ಯಕರ್ತ ಗಿರೀಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪಾ, ಫಾ. ಅಜಯ್ ಪತರಮಚ್ಚಿರ ಮತ್ತು ಫಾ. ಜೋಯ್ ಪಝಯಪರಂಬಿಲ್ ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿಸ್ಟರ್ ಅಮ್ಮಿ ಸ್ವಾಗತಿಸಿ, ಬ್ಲಾಕ್ ಪ್ರಾಜೆಕ್ಟ್ ಮ್ಯಾನೇಜರ್ ಅಜಯ್ ವಂದಿಸಿದರು.

ಬೆಳ್ತಂಗಡಿ ಸೈಂಟ್ ಥೋಮಸ್ ಕಾಲೇಜು ಕಾರೆಂಟೈನ್ ಆವಶ್ಯಕತೆಗೆ ತಾಲೂಕು ಆಡಳಿತಕ್ಕೆ ಬಿಟ್ಟುಕೊಡಲು ಸಿದ್ಧ ಎಂದು ಈ ಸಂದರ್ಭ ಫಾ‌ ಅಬ್ರಾಹಂ ಮತ್ತು ಪಿಆರ್ ಒ ಫಾ. ಟೋಮಿ ತಿಳಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.