ದೇಶದಲ್ಲಿ ಮೇ 3ರವರೆಗೆ ಲಾಕ್‍ಡೌನ್ ವಿಸ್ತರಣೆ ಘೋಷಿಸಿದ ಪ್ರಧಾನಿ ಮೋದಿ

Advt_NewsUnder_1
Advt_NewsUnder_1
Advt_NewsUnder_1

* ಎರಡನೇ ಹಂತದಲ್ಲಿ 19 ದಿನಗಳ ಲಾಕ್‍ಡೌನ್
* ನರೇಂದ್ರ ಮೋದಿಯಿಂದ ಸಪ್ತ ಸೂತ್ರಗಳನ್ನು ಪಾಲನೆ ಮಾಡಲು ಸೂಚನೆ

ನವದೆಹಲಿ: ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ವಿಧಿಸಿದ್ದ ಲಾಕ್‍ಡೌನ್‍ನ್ನು ಇನ್ನೂ 19ದಿನಗಳ ಕಾಲ ಅಂದರೆ ಮೇ 3ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಪ್ರಧಾನಿಯವರು ಎ.14ರ ಬೆಳಗ್ಗೆ10 ಗಂಟೆಗೆ ದೇಶವನ್ನುದ್ದೇಶಿಸಿ ಭಾಷಣ ಆರಂಭಿಸಿ ಕೊರೊನಾ ವಿರುದ್ಧ ಹೋರಾಡಲು ದೇಶದಲ್ಲಿ ಎರಡನೇ ಹಂತದ ಲಾಕ್‍ಡೌನ್‍ನ್ನು ವಿಧಿಸಿದ್ದಾರೆ. ಕೊರೊನಾ ವಿರುದ್ಧ ಭಾರತದ ಹೋರಾಟ ಶಕ್ತಿಶಾಲಿಯಾಗಿ ಮುಂದುವರೆಯುತ್ತಿದೆ. ಜನರ ತ್ಯಾಗದಿಂದಾಗಿ ಕೊರೊನಾದಿಂದ ಆಗಬಹುದಾಗಿದ್ದ ಪರಿಣಾಮ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಭಾರತೀಯರು ಕಷ್ಟಗಳನ್ನು ಸಹಿಸಿ ಭಾರತವನ್ನು ರಕ್ಷಿಸಿದ್ದೀರಿ, ನಿಮಗೆ ಎಷ್ಟು ಕಷ್ಟವಾಗಿರಬಹುದು ಅಂತ ನನಗೆ ಗೊತ್ತಿದೆ. ಕೆಲವರಿಗೆ ಊಟಕ್ಕೂ ತೊಂದರೆಯಾಗಿದೆ. ಕೆಲವರು ಕುಟುಂಬಸ್ಥರಿಂದ ದೂರ ಇರಬೇಕಾಗಿದೆ. ನೀವು ಸೈನಿಕರಂತೆ ಹೋರಾಡುತ್ತಿದ್ದು, ನಿಮಗೆ ಅಭಿನಂದಿಸುತ್ತೇನೆ ಎಂದರು.

ಕೊರೊನಾ ವಿರುದ್ಧ ಹೋರಾಟವು ಮುಂದಿನ ಎ.20ರವರೆಗೆ ತೀವ್ರಗೊಳಿಸಲಾಗುವುದು. ಬೇರೆ ದೇಶಗಳಿಗೆ ಹೋಲಿಸಿದರೆ ನಾವು ಯಶಸ್ವಿಯಾಗಿದ್ದೇವೆ. ವಿದೇಶದಿಂದ ಬರುವವರಿಗೆ ಸ್ಕ್ರೀನಿಂಗ್ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸೋಂಕು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಿಮ್ಮ ನಿಮ್ಮ ಪರಿವಾರದ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುವೆ. ಆರ್ಥಿಕ ದೃಷ್ಟಿಯಿಂದ ನೋಡಿದರೆ ದೇಶವು ಭಾರಿ ಬೆಲೆ ತೆತ್ತಿದೆ ಎಂದು ಹೇಳಿದರು.

ಎರಡನೇ ಹಂತದ ಲಾಕ್‍ಡೌನ್‍ನಲ್ಲಿ ಕೆಲವು ಪ್ರಧಾನಿ ಮೋದಿಯವರು ಸಪ್ತ ಸೂತ್ರಗಳನ್ನು ಹೇಳಿದ್ದಾರೆ ಅವುಗಳೆಂದರೆ:
* ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಡಿ
* ಆರೋಗ್ಯಸೇತು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
* ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾರ್ಗಸೂಚಿ ಪಾಲಿಸಿ
* ಮನೆಯಲ್ಲಿರುವ ಹಿರಿಯ ನಾಗರಿಕರ ಬಗ್ಗೆ ಜಾಗೃತೆ ಇರಲಿ
* ಸಾಮಾಜಿಕ ಅಂತರ ಹಾಗೂ ಲಾಕ್‍ಡೌನ್ ಲಕ್ಷ್ಮಣರೇಖೆ ಪಾಲಿಸಿ
* ನಿರ್ಗತಿಕರು, ಬಡವರಿಗೆ ಸಹಾಯಹಸ್ತ ಚಾಚಿ
* ಆರೋಗ್ಯ, ಶುಚಿತ್ವ ಕಾರ್ಯಕರ್ತರ ಬಗ್ಗೆ ಗೌರವವಿರಲಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.