ಕಾಜೂರು ಜುಮ್ಮಾ ಮಸ್ಜಿದ್, ದರ್ಗಾ ಶರೀಫ್‌ನಿಂದ ಮಾದರಿ ಕಾರ್ಯ

ಮಿತ್ತಬಾಗಿಲು: ಲಾಕ್ ಡೌನ್ ನಿಂದ ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲಿ ಕಷ್ಟದ ಜೀವನ ನಡೆಸುತ್ತಿರುವ ಕಾಜೂರು ಜಮಾಅತ್‌ನ ಪ್ರತಿಯೊಂದು ಮನೆಗಳಿಗೆ ದೊಡ್ಡ ಮೊತ್ತದ ಆರ್ಥಿಕ ಸಂಪನ್ಮೂಲ ಬಳಸಿ ಅಹಾರ ಸಾಮಾಗ್ರಿಗಳನ್ನು ಕೊಡುವ ಮೂಲಕ ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಆಡಳಿತ ಮಂಡಳಿ ಮಾದರಿ ಮೆರೆದಿದೆ.

ಲಾಕ್‌ಡೌನ್‌ನಿಂದಾಗಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಜಮಾಅತ್ ವ್ಯಾಪ್ತಿಯ ಮುನ್ನೂರಕ್ಕೂ ಅಧಿಕ ಅರ್ಹ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ಅವರ ಸ್ಥಿತಿಯನ್ನು ಸ್ವಯಂ ಪ್ರೇರಿತವಾಗಿ ಅರ್ಥೈಸಿಕೊಂಡಿರುವ ಆಡಳಿತ ಮಂಡಳಿ ತುರ್ತು ಸಭೆ ಸೇರಿ ಕೈಗೊಂಡ ನಿರ್ಧಾರದಂತೆ ಆಹಾರ ಸಾಮಾಗ್ರಿಗಳ ಕಿಟ್ ನೀಡುವ ಯೋಜನೆ ರೂಪಿಸಿದೆ.

ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ. ಎಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಉಪಾಧ್ಯಕ್ಷ ಅಬ್ದುರ್ರಹ್ಮಾನ್, ಸದಸ್ಯರಾದ ಬದ್ರುದ್ದೀನ್, ಎನ್. ಎಂ ಯಾಕುಬ್, ಉಮರ್‌ಕುಂಞಿ, ಎ. ಯು ಮುಹಮ್ಮದಾಲಿ, ಸಿದ್ದೀಕ್ ಕೆ. ಎಚ್., ಅಬ್ಬಾಸ್, ಅಬ್ದುಲ್ ಖಾದರ್ ಮೊದಲಾದವರು ಕಿಟ್ ವಿರತಣೆ ವೇಳೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.