ಬದುಕು ಕಟ್ಟೋಣ ಬನ್ನಿ ತಂಡದಿಂದ 176 ಬಡಕುಟುಂಬಗಳಿಗೆ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ:- ಕೊರೋನಾ ಮಹಾಮಾರಿಯ ರುದ್ರನರ್ತನಕ್ಕೆ ಪ್ರಪಂಚದಾದ್ಯಂತ ತತ್ತರಿಸಿ ಹೋಗಿದ್ದು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಜನತೆ ಮನೆಯಿಂದ ಹೊರ ಬರಲು ಆಗದೇ ಇದ್ದು ಅಗತ್ಯ ವಸ್ತುಗಳ ಖರೀದಿಗೆ ಪರಿತಪಿಸುತ್ತಿರುವ ಸಂಧರ್ಭದಲ್ಲಿ ಉಜಿರೆಯ “ಬದುಕು ಕಟ್ಟೋಣ ಬನ್ನಿ” ತಂಡದ ಲಕ್ಷ್ಮಿ ಗ್ರೂಪ್ಸ್ ನ ಶ್ರೀ ಮೋಹನ್ ಹಾಗೂ ಸಂಧ್ಯಾ ಟ್ರೇಡರ್ಸ್ ನ ಶ್ರೀ ರಾಜೇಶ್ ಪೈ ಇವರ ನೇತೃತ್ವದಲ್ಲಿ ಉಜಿರೆಯ ವಿವಿಧ ಉದ್ಯಮಿಗಳ ಸಹಕಾರದೊಂದಿಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಅಗತ್ಯ ವಸ್ತುಗಳ ಕಿಟ್ ಗಳನ್ನು ವಿತರಿಸಿದರು.

ಉಜಿರೆಯ “ಬದುಕು ಕಟ್ಟೋಣ ಬನ್ನಿ ” ತಂಡದ ವತಿಯಿಂದ ಆರ್ಹ ಬಡಕುಟುಂಬಗಳಿಗೆ ಒಟ್ಟು 176 ಅಗತ್ಯ ಆಹಾರ ಕಿಟ್ ನೀಡುವ ಯೋಜನೆ ಹಾಕಿಕೊಂಡಿದ್ದು ಈ ದಿನ ಉಜಿರೆ ಗ್ರಾಮದ ಪೆರ್ಲದ -21 ಕುಟುಂಬ, ಮುಂಡತ್ತೋಡಿಯ-24 ಕುಟುಂಬ,
ಬಡಕೊಟ್ಟು- 11 ಕುಟುಂಬ, ಪಾಣಿಯಾಲು-14 ಕುಟುಂಬ ಹೀಗೆ ಒಟ್ಟು 70 ಕುಟುಂಬಕ್ಕೆ ಅಗತ್ಯ ವಸ್ತುಗಳ ಕಿಟ್ ವಿತರಣೆ ನಡೆಸಲಾಯಿತು.

ಉಳಿದ ಕುಟುಂಬಗಳಿಗೆ ನಾಳೆ ವಿತರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಂದು ಉಜಿರೆಯ ಪೆರ್ಲ,ಮುಂಡತ್ತೋಡಿ, ಬಡಕೊಟ್ಟು, ಪಾಣಿಯಾಲು ಪರಿಸರದ 70 ಕುಟುಂಬಗಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಜಿರೆ ಲಕ್ಷ್ಮೀ ಗ್ರೂಪ್ಸ್ ನ ಮಾಲಕ – ಮೋಹನ್ ಕುಮಾರ್, ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ರೋಟೆರಿಯಾನ್ ಶ್ರೀಧರ್ ಸುರಕ್ಷಾ ಉಜಿರೆ, ರಾಘವೇಂದ್ರ ಬೈಪಾಡಿತ್ತಾಯ, ಪ್ರಕಾಶ್ ಅಪ್ರಮೇಯ, ದೇವಪ್ಪ ಗೌಡ ಸಾಯಿಕೃಪಾ, ಅರವಿಂದ್ ಕಾರಂತ್, ಶ್ರೀಧರ್ ಮರಕ್ಕಡ, ಉಮೇಶ್ ಶೆಟ್ಟಿ ,ಡಾ.ದಯಾಕರ್ , ಮೋಹನ್ ಚೌಧರಿ, ಪ್ರಭಾಕರ ಹೆಗ್ಡೆ, ಗಣೇಶ್ ಇಂಜಿನಿಯರ್, ರಾಜೇಶ್ ಶೆಟ್ಟಿ ನವಶಕ್ತಿ, ಭರತ್ ಕುಮಾರ್, ಲಕ್ಷ್ಮಣ್ ಸಫಲ್ಯ, ಸಿಂಧೂ ಜನಾರ್ಧನ, ರವಿ ಚಕ್ಕಿತ್ತಾಯ, ಜಯಪ್ರಕಾಶ್ ಶೆಟ್ಟಿ, ತಾ.ಪ.ಸದಸ್ಯ ಶಶಿಧರ್ ಕಲ್ಮಂಜ, ತಿಮ್ಮಯ್ಯ ನಾಯ್ಕ್, ದಿನೇಶ್ ನಾಯ್ಕ, ಮಾಧವ ಕಾಮತ್, ಪ್ರತೀಕ್ ಕೋಟ್ಯಾನ್, ರಾಘವೇಂದ್ರ , ಶ್ರೀಧರ್, ಯೋಗೀಶ್ ಕುಲಪ್ಪಳ ,ಚರಣ್ ,ಧನುಷ್ ಎಚ್ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.