ಅಡಿಕೆ ಬೆಳೆಗಾರರ ನೆರವಿಗೆ ಬಂದ ಪ್ರಾ.ಕೃ.ಸ.ಸಂಘ ಧರ್ಮಸ್ಥಳ ಅಡಿಕೆಗೆ ಅಡಮಾನ ಸಾಲ‌ ವ್ಯವಸ್ಥೆ

Advt_NewsUnder_1
Advt_NewsUnder_1

ಧರ್ಮಸ್ಥಳ: ಕೋವಿಡ್ -19 ಪರಿಣಾಮಗಳಿಂದ ತೊಂದರೆಗೆ ಒಳಗಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ) ಧರ್ಮಸ್ಥಳ ಇದರ ಸದಸ್ಯರ ದೈನಂದಿನ ಅಗತ್ಯಗಳನ್ನು ಪೂರೈಸಲು ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಅಡಮಾನ ಸಾಲದ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ.

ಲಾಕ್ ಡೌನ್ ಅವಧಿ ಮುಗಿಯುವ ವರೆಗೆ ರೈತ ಸದಸ್ಯರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಧರ್ಮಸ್ಥಳ ಕೇಂದ್ರ ಕಚೇರಿಯಲ್ಲಿ ಪ್ರತಿ ದಿನ 20 “ಎ” ದರ್ಜೆ ಸದಸ್ಯರಿಂದ ಗರಿಷ್ಟ 100 ಕೆ.ಜಿ. ಮೀರದಂತೆ, ಅಡಿಕೆ ಕಿಲೋ ಒಂದಕ್ಕೆ ತಲಾ 175/- ರೂಪಾಯಿಯಂತೆ ಅಡಮಾನ ಸಾಲ ನೀಡಲಾಗುವುದು. ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರ ಬೇಡಿಕೆಯನ್ನು ಅನುಸರಿಸಿ ಸಂಘದ ಆಡಳಿತ ಮಂಡಳಿ, ಸಣ್ಣ ಪ್ರಮಾಣದಲ್ಲಿ ಸಂಘದ ಮುಖ್ಯ ಕಛೇರಿಯ ಗೋದಾಮು ನಲ್ಲಿ ದಾಸ್ತಾನು ಇರಿಸಿ ಷರತ್ತುಗಳನ್ವಯ ಮೇರೆಗೆ ಅಡಿಕೆಗೆ ಅಡಮಾನ ಸಾಲ ನೀಡುವ ಬಗ್ಗೆ ತಿರ್ಮಾನಿಸಿದ್ದು, ಸದಸ್ಯರು ಹಿಂದಿನ ದಿನ ಸಂಘವನ್ನು ಸಂಪರ್ಕಿಸಿ ( 08256-277142 ) ಟೋಕನ್ ನಂಬ್ರ ಪಡೆದು ಮರು ದಿನ ಸಂಘದ ಗೋದಾಮುನಲ್ಲಿ ದಾಸ್ತಾನು ಇರಿಸಿದಲ್ಲಿ ಅಡಮಾನ ಸಾಲದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಹಾಗೂ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಮುನ್ನೆಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಬ್ಬರಿಗೆ 100 ಕೆ.ಜಿ ಗರಿಷ್ಠ;

ಒಬ್ಬ ರೈತರಿಂದ 100 ಕೆ.ಜಿ ಅಡಿಕೆ ಮಾತ್ರ ಪಡೆಯಲಾಗುತ್ತದೆ.
ಅಡಿಕೆಯನ್ನು ಸಂಘದ ಕೇಂದ್ರ ಕಛೇರಿಯಲ್ಲಿ ದಾಸ್ತಾನು ಇಡಬೇಕು.
ದಿನಕ್ಕೆ 20ಜನರಿಗೆ ಮಾತ್ರ ಸಾಲ ನೀಡಲಾಗುವುದು.
“ಎ” ದರ್ಜೆ ಸದಸ್ಯರಿಗೆ ಮಾತ್ರ ಅವಕಾಶ ಮುಂಗಡ ಟೋಕನ್ ಪಡೆದುಕೊಳ್ಳುವುದು.
ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಮುನ್ನೆಚ್ಚರಿಕೆಯಿಂದ ವ್ಯವಹರಿಸುವುದು.

+ಹರಿದಾಸ್ ಗಾಂಭೀರ, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ) ಧರ್ಮಸ್ಥಳ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.